ಬಂಟ್ವಾಳ: ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಗೆ ಅಖಾಡ ಸಿದ್ದವಾಗಿದ್ದು,ಅಬ್ಬರದ ಪ್ರಚಾರಕಾರ್ಯವು ನಡೆಯುತ್ತಿದೆ.ಈ ಮಧ್ಯೆ ಬಿಜೆಪಿ ಬಂಟ್ವಾಳ ಮಂಡಲದ ಪದಾಧಿಕಾರಿ ಮತ್ತು ಕಾರ್ಯಕರ್ತರ ತಂಡ ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದೆ.


ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದ ಬಿಜೆಪಿಯ ಹಾಲಿ ಶಾಸಕ ಪ್ರಶಾಂತ್ ಠಾಕೂರ್ ರವರ ಪರವಾಗಿ ರಾಯ್ ಘಡ್  ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಲಕ್ಶ್ಮೀಶ  (ಸುಜೀತ್ ) ಪೂಜಾರಿ ನೇತೃತ್ವದಲ್ಲಿ ಪನ್ವೆಲ್  ಪೇಟೆಯಲ್ಲಿ ಮನೆ,ಮನೆ ಸಂಪರ್ಕಿಸುವ ಮೂಲಕ  ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯಕರ್ತರು ಮಂಗಳವಾರ  ಮತಯಾಚನೆಗೈದರು.


ಈ ಸಂದರ್ಭದಲ್ಲಿ  ಬಿಜೆಪಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯದರ್ಶಿ ಪ್ರಭಾಕರ ಪ್ರಭು, ಕರ್ಪೆ ಶಕ್ತಿ ಕೇಂದ್ರ ಪ್ರಮುಖ್ ತೇಜಸ್ ಪೂಜಾರಿ, ಪ್ರಮುಖರಾದ ನವೀನ ಪೂಜಾರಿ ಕರ್ಪೆ, ಸದಾನಂದ ಪೂಜಾರಿ ಕರ್ಪೆ, ತೇಜಸ್ವಿನಿ ಲಕ್ಶ್ಮೀಶ ಪೂಜಾರಿ ಪನ್ವೆಲ್,  ಅಡ್ವಕೇಟ್ ಸವೀನಾ ಬಂಗೇರ ಪನ್ವೆಲ್,  ಶಿವದಾಸನ್ ಪನ್ವೆಲ್,ಸರಸ್ವತಿ ಪನ್ವೆಲ್ ಮತ್ತಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು 

By suddi9

Leave a Reply

Your email address will not be published. Required fields are marked *