Published On: Tue, Nov 12th, 2024

ಮರಾಠಿ ಮಣ್ಣಿನಲ್ಲಿ ತುಳುನಾಡ ಮಣ್ಣಿನ ಕಂಪು ಪುಣೆಯಲ್ಲಿ ರಜತ ಮಹೋತ್ಸವ ಸಂಭ್ರಮದಲ್ಲಿ ತುಳುನಾಡ ಜಾತ್ರೆ

ಪುಣೆ : ಮಹಾರಾಷ್ಟ್ರದ ಪುಣ್ಯ ಭೂಮಿ ಸಾಂಸ್ಕೃತಿಕ ನಗರಿ ಪುಣೆಯ ಹೆಮ್ಮೆಯ ಸಂಸ್ಥೆ ತುಳುಕೂಟ ಪುಣೆ ರಜತ ಮಹೋತ್ಸವದ ಸಂಭ್ರಮವು ಬೆಳಿಗ್ಗೆ 9 ರಿಂದ ಸಾಯಂಕಾಲ 9 ರ ವರೆಗೆ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಮ್ನನ ನಾಡೋಜ ಡಾ. ಜಿ. ಶಂಕರ್ ವೇದಿಕೆಯಲ್ಲಿ ತುಳುನಾಡ ಜಾತ್ರೆ, ವೈಭವದ ಮೆರವಣಿಗೆ, ಪೂರ್ಣ ಕುಂಭ ಸ್ವಾಗತದೊಂದಿಗೆ, ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಪುಣೆಯಲ್ಲಿ ಪ್ರಥಮ ಬಾರಿಗೆ ತುಳುನಾಡ ಜಾತ್ರೆಯಾಗಿ ಸಮಸ್ತ ತುಳು-ಕನ್ನಡ ಬಾಂಧವರಿಂದ ಆಚರಿಸಲ್ಪಟ್ಟರು.


ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಪುಣೆಯಲ್ಲಿ ಹಾಗೂ ಹೊರ ರಾಜ್ಯ-ದೇಶಗಳಲ್ಲಿ ವಿಶೇಷ ಸಾಧನೆ ಮಾಡಿದಂತಹ 25 ತುಳುನಾಡಿನ ಸಾಧಕರಿಗೆ “ಗೌರವ ಪ್ರಶಸ್ತಿ”ಗಳನ್ನು ಪ್ರಧಾನಿಸಿ ಗೌರವಿಸಲಾಯಿತು.
“ಡಾ. ಪ್ರಕಾಶ್ ಶೆಟ್ಟಿ” ತುಳುನಾಡ ಪ್ರಾಚ್ಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯ ಉದ್ಘಾಟನೆಗೊಂಡು,
ಇಲ್ಲಿ ಹುಟ್ಟಿ ಬೆಳೆದ ತುಳುವರಿಗೆ ತುಳುನಾಡ ಕಲೆ ಸಂಸ್ಕೃತಿ, ಆಚಾರ, ವಿಚಾರಗಳು, ಪುರಾತನ ತುಳುನಾಡಿನ ಉಪಯೋಗಿಸುತಿದ್ದ ಪ್ರಾಚ್ಯ ವಸ್ತುಗಳ ಪ್ರದರ್ಶನ, ಸ್ತಬ್ದ ಚಿತ್ರಗಳ ಪ್ರದರ್ಶನ, ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು.


ಬೆಳಿಗ್ಗೆ 9.00 ರಿಂದ 10.30 ರವರೆಗೆ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದಿಂದ ತುಳು ಭಜನೆ ಮತ್ತು ಜಾನಪದ ಗೀತೆ, ಹಾಗೂ ಶ್ರೀ ವಿಠಲ್ ನಾಯಕ್ ಕಲ್ಲಡ್ಕ ಮತ್ತು ತಂಡ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ನಡೆಯಿತು. ಜೊತೆಗೆ ತುಳುನಾಡ ಶೈಲಿಯ ಪ್ರೀತಿ ಭೋಜನ ಏರ್ಪಡಿಸಲಾಗಿತ್ತು. ಪುಣೆ ತುಳುವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಿತು.


ರಜತ ಮಹೋತ್ಸವದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ಮಾತನಾಡುತ್ತ ತುಳುಕೂಟದ ಪ್ರಾರಂಭದ ಸದಸ್ಯನಾಗಿ ತುಳುವನಾಗಿ ನನ್ನ ಸೇವೆಯನ್ನು ಸದಾ ನೀಡುತ್ತಾ ಬಂದವ. ಪುಣೆಯಲ್ಲಿ ನೆಲೆಸಿರುವ ಎಲ್ಲಾ ಧರ್ಮ, ಜಾತಿ ಭಾಂದವರ ತುಳು ಸಂಘಟನೆಯಿದ್ದಾರೆ ಅದು ತುಳುಕೂಟ ಪುಣೆಯಾಗಿದೆ.


ತುಳುಕೂಟ ಮೂಲಕ ತುಳು-ಕನ್ನಡಿಗ ಮಕ್ಕಳ ಶಿಕ್ಷಣ, ಅರೋಗ್ಯ, ಕಷ್ಟ ಸುಖಗಳಿಗೆ ಸ್ಪಂದಿಸಿ ಸಹಕಾರ ನೀಡಿ ಸಂಘವನ್ನು ಬೆಳೆಸಿದ್ದೇವೆ. ತುಳುಕೂಟಕ್ಕೆ ಏನಾದರೂ ಮಾಡಬೇಕೆಂಬ ಇಚ್ಛೆಯಂತೆ ತುಳುಕೂಟದ ಅಧ್ಯಕ್ಷರು ಕೈಗೊಂಡ ಸ್ವಂತ ಕಚೇರಿ, ಮಿನಿ ತುಳು ಭವನದ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.


ಪುಣೆ ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ಅಶ್ವತಗುತ್ತು ಮಾತನಾಡುತ್ತ 25ವರ್ಷಗಳ ಕಾಲ ತುಳುವರಿಗಾಗಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದ ಸಂಘಕ್ಕೆ ಸ್ಥಾಪಕ ಅಧ್ಯಕ್ಷರ ಬಯಕೆಯಂತೆ ರಜತ ಮಹೋತ್ಸವದ ಸಂಭ್ರಮ ಸಂಧರ್ಭದಲ್ಲಿ ಸ್ವಂತ ಕಛೇರಿ ಖರೀದಿಯೊಂದಿಗೆ, ಮಿನಿ ಭವನವನ್ನಾಗಿ ಪರಿವರ್ತಿಸಿ ತುಳುವರ ಸೇವೆಗಾಗಿ ನೀಡುವ ಉದ್ದೇಶದೊಂದಿಗೆ ನಾವು ಕೈ ಗೊಂಡ ಕಾರ್ಯಕ್ರಮ ಫಲಪ್ರದವಾಗಿ ಸಾಗುತಿದೆ ಎಂದು ತಿಳಿಸಿದರು.


ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವ ದತ್ತ ಸಂಸ್ಥಾನಂ, ಶ್ರೀ ಕ್ಷೇತ್ರ ಒಡಿಯೂರು ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಅನಂತ ಕೃಷ್ಣ ಅಸ್ರಣ್ಣ , ಮೂಡಬಿದಿರೆಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ ಸ್ಥಾಪಕರುನಾಡೋಜ ಡಾ. ಜಿ. ಶಂಕರ್, ಡಾ. ಕೆ. ಧರಣಿದೇವಿ ಮಾಲಗತ್ತಿ IPS, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ,ಭಾರತ್ ಕೋ ಅಪರೇಟಿವ್ ಬ್ಯಾಂಕ್ ಕಾರ್ಯಾಧ್ಯಕ್ಷರು ಸೂರ್ಯಕಾಂತ್ ಸುವರ್ಣ ಮುಂಬಯಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಅಣ್ಣಪ್ಪ ಪಂಜುರ್ಲಿ ಜುಮಾದಿಬಂಟ ದೈವಸ್ಥಾನ ಆಡಳಿತ ಮೊಕೇಸರ ಅಮ್ಮಾಡಿ ರವಿಶಂಕರ್ ಶೆಟ್ಟಿ ಬಡಾಜೆ , ದಕ್ಷಿಣ ಕನ್ನಡ ಉಡುಪಿ ಮೊಗವೀರ ಸಭಾ ಅಧ್ಯಕ್ಷ ಜಯ ಕೋಟ್ಯಾನ್, ಅನಿವಾಸಿ ಭಾರತೀಯ, ಡಾ. ಡೆವಿಸ್ ಫ್ರಾಂಕ್ ಫೆರ್ನಾಂಡಿಸ್, ಖ್ಯಾತ ವಕೀಲರು ಉಡುಪಿ ಉಮೇಶ್ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಶೆಟ್ಟಿ ಎಂ. ಆರ್. ಜಿ. ಗ್ರೂಪ್ಸ್, ಬೆಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು, ಮಂಗಳೂರು, ಜಾಗತಿಕ ಬಂಟರ ಸಂಘ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ,ಪುಣೆ ಇನ್ನಪಾರ್ಕಿಲ್ ಪೆಟ್ಟು ಬಂಟರ ಸಂಘ [ರಿ] ಅಧ್ಯಕ್ಷ ಸಂತೋಷ್ ಶೆಟ್ಟಿ , ಬಂಟರ ಸಂಘ [ರಿ], ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಉಡುಪಿ ತುಳುಕೂಟ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ರತ್ನಾಕರ್ ಹೆಗ್ಡೆ ಮಟ್ಟಾರ್ ಖ್ಯಾತ ವಕೀಲರು ಉಡುಪಿ, ಪ್ರತಾಪ್‌ ಸಿಂಹಾ ನಾಯಕ್‌ ಎಂಎಲ್‌ ಸಿ, ವೇದವ್ಯಾಸ್‌ ಕಾಮತ್‌ ಶಾಸಕರು ಮಂಗಳೂರು ದಕ್ಷಿಣ, ಉಡುಪಿ ತೋನ್ಸೆ ಮನೋಹರ್‌ ಶೆಟ್ಟಿ, ಹಾಗೂ ಸಲಹಾ ಸಮಿತಿ ತುಳುಕೂಟ ಪುಣೆ ಮತ್ತ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ನವನೀತ ಶೆಟ್ಟಿ ಮತ್ತು ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter