Published On: Sun, Jan 26th, 2025

ಬೊರಿವಿಲಿ ; ಶ್ರೀಬ್ರಹ್ಮ ಬೈದರ್ಕಳರ ಗರಡಿಯ ೫೧ನೇ ಬ್ರಹ್ಮ ಬೈದರ್ಕಳ ನೇಮೋತ್ಸವ

ಮುಂಬಯಿ: ಬೃಹನ್ಮುಂಬಯಿಯ ಉಪನಗರ ಬೊರಿವಿಲಿ ಪೂರ್ವದ ದೇವುಲಪಾಡಾ ಇಲ್ಲಿನ ತುಳುನಾಡ ವೀರ ದೈವಗಳಾದ ಕೋಟಿ ಚೆನ್ನಯರನ್ನೊಳಗೊಂಡ ಓಂ ಶ್ರೀ ಜಗದೀಶ್ವರೀ ಸೇವಾ ಸಮಿತಿ (ರಿ.) ಇಂದಿಲ್ಲಿ ಶನಿವಾರ ರಾತ್ರಿ ತನ್ನ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ೫೧ನೇ ವಾರ್ಷಿಕ ಮಹಾಪೂಜೆ ನೆರವೇರಿಸಿ ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲ್ (ಜೋಗಿ ಪುರುಷರ) ನೇಮೋತ್ಸವ ನೆರವೇರಿಸಿತು.

ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಕಟಪಾಡಿ ಅವರ ನೇತೃತ್ವ, ಆಶೀರ್ವದ ಮತ್ತು ಮಾರ್ಗದರ್ಶನದಲ್ಲಿ ಕಳೆದ ಶುಕ್ರವಾರ ಅಪರಾಹ್ನ ಕಲಶ ಪ್ರತಿಷ್ಠೆ, ರಾತ್ರಿ ಅಗೆಲ ತಂಬಿಲ, ಬೈದರ್ಕಳ ದರ್ಶನ ಸಹಿತ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪ್ರದಾಯಿಕವಾಗಿ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು.  

ಇಂದಿಲ್ಲಿ ಶನಿವಾರ ಬೆಳಿಗ್ಗೆ ಗಣಹೋಮ, ದುರ್ಗಾಪೂಜೆ,  ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಸಲ್ಪಟ್ಟಿತು. ರಾತ್ರಿ ಬೈದರ್ಕಳ ನೇಮ (ಕೋಲ), ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಾಲಮ್ಮನ ನೇಮ ಜರುಗಿತು. ಗರಡಿಯಲ್ಲಿ ರಘು ಕೆ.ಕೋಟ್ಯಾನ್ ಶಾಸ್ತ್ರಾನುಸಾರ ದೈನಂದಿನ ಪೂಜಾಧಿಗಳನ್ನು ನೆರವೇರಿಸಿದರು. ವಿದ್ವಾನ್ ಸುಕುಮಾರ್ ಭಟ್ ಬೈಕಲ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ನೇಮೋತ್ಸವದಲ್ಲಿ ದೇವಿಪಾತ್ರಿಯಾಗಿ ಪ್ರಸಾದ್ ಕಲ್ಯ (ಮುಲುಂಡ್), ಮಧ್ಯಾಸ್ಥರಾಗಿ ನರ್ಸಪ್ಪ ಕೆ.ಮಾರ್ನಾಡ್, ಉಮೇಶ್ ಸುವರ್ಣ, ಬೈದರ್ಕಳರ ಪೂಜಾರಿಗಳಾಗಿ  ಸುಕೇಶ್ ಪೂಜಾರಿ (ಬಾಳ್ಕಟ್ಟ ಗರಡಿ), ದಿನೇಶ ಪೂಜಾರಿ (ಚೆರ್ಕಾಡಿ ಗರಡಿ) ಹಾಗೂ ಗರಡಿ ಅರ್ಚಕರಾಗಿ ಸತೀಶ್ ಪೂಜಾರಿ ಮಣಿಬೆಟ್ಟು ಗರಡಿ ಸಹಕರಿಸಿದ್ದು,  ದಿವಾಟಿಗೆ, ವಾಲಗ ತಂಡ, ಗರಡಿ ಸೇವಕರು ಮತ್ತು ಕೋಲ ಕಟ್ಟುವವರ ಸಹಯೋಗದಲ್ಲಿ  ನೇಮೋತ್ಸವ ನೇರವೇರಿದ್ದು ಭಾನುವಾರ ಮುಂಜಾನೆ  ಮಂಗಳದೊಂದಿಗೆ ವಾರ್ಷಿಕ ನೇಮೋತ್ಸವ ಕೊನೆಗೊಂಡಿತು.

ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ ಜೆ.ಪೂಜಾರಿ, ಸಂತೋಷ್ ಕೆ.ಪೂಜಾರಿ, ನರೇಶ್ ಕೃಷ್ಣ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ಕರ್ಕೇರ, ಹಿರಿಯ ಹೊಟೇಲುದ್ಯಮಿ ಮುಂಡಪ್ಪ ಎಸ್.ಪಯ್ಯಡೆ, ಸಮಾಜ ಸೇವಕರುಗಳಾದ ವಿಕ್ರಮ್ ಚೌಗುಳೆ, ಕಮಲೇಶ್ ಶೆಟ್ಟಿ, ಪ್ರೇಮನಾಥ್ ಪಿ.ಕೋಟ್ಯಾನ್, ಬಿರ್ಲಾ ಕ್ಯಾಪಿಟಲ್‌ನ ಸಿಇಒ ಅಶೋಕ್ ಸುವರ್ಣ, ಧನಂಜಯ ಎಸ್.ಕೋಟ್ಯಾನ್ (ಶಾಂತಿ)  ಮತ್ತು ಗಣ್ಯರನೇಕರು ಪಾಲ್ಗೊಂಡಿದ್ದರು. ಸಮಿತಿಯ ಪದಾಧಿಕಾರಿಗಳು ಪುಷ್ಫಗುಚ್ಛ, ಪ್ರಸಾದವನ್ನಿತ್ತು ಉಪಸ್ಥಿತ ಕೊಡುಗೈದಾನಿಗಳು, ಭಕ್ತರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಎಸ್.ಸಾಲಿಯಾನ್, ಉಪಾಧ್ಯಕ್ಷ ನರ್ಸಪ್ಪ ಕೆ.ಮಾರ್ನಾಡ್, ಗೌ| ಪ್ರ| ಕಾರ್ಯದರ್ಶಿ ಸಿಎ| ಅಭಿಜಿತ್ ಜಿ.ಶೆಟ್ಟಿ, ಗೌರವ ಕೋಶಾಧಿಕಾರಿ ಆಶಿಶ್ ಆರ್.ಕೋಟ್ಯಾನ್, ಜತೆ ಕಾರ್ಯದರ್ಶಿ ಸದಾಶಿವ ಡಿ.ಸಾಲ್ಯಾನ್, ಜತೆ ಕೋಶಾಧಿಕಾರಿ ಉಷಾ ಎಸ್.ಮೆಂಡನ್, ಸಮಿತಿಯ ಸಕ್ರೀಯ ಸಲಹಾಗಾರರಾದ ದಯಾನಂದ ಪೂಜಾರಿ ವಾರಂಗ, ಕರುಣಾಕರ್ ಕೆ.ಕಾಪು, ವಿಶ್ವನಾಥ ಬಿ.ಬಂಗೇರ, ರಜಿತ್ ಎಂ.ಸುವರ್ಣ ಸೇರಿದಂತೆ ಸೇವಾ ಸಮಿತಿಯ ಮಾಜಿ-ಹಾಲಿ ಪದಾಧಿಕಾರಿಗಳು, ಆಡಳಿತ ಸಮಿತಿ, ಅರ್ಚಕ ವೃಂದ, ಯುವವಾಹಿನಿ ಮತ್ತು ಮಹಿಳಾ ಸಮಿತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು. ವರ್ಷಂಪ್ರತಿಯಂತೆ ಭಕ್ತಾಧಿಗಳು ಪಾಲ್ಗೊಂಡು ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು.

ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter