ಗದಗ: ಸಾರಿಗೆ ಬಸ್ ಹತ್ತುವ ವೇಳೆ ಕೆಳಗೆ ಬಿದ್ದು ವಿದ್ಯಾರ್ಥಿ ಮೃತ
ಸಾರಿಗೆ ಬಸ್ ಹತ್ತುವೇಳೆ ವಿದ್ಯಾರ್ಥಿಯೂ ಕೆಳಗೆ ಬಿದ್ದು ಮೃತ ಪಟ್ಟ ಘಟನೆಯೂ ಗದಗ ಜಿಲ್ಲೆ ನರಗುಂದ ತಾ. ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ನರಗುಂದ ಪದವಿ ವಿದ್ಯಾರ್ಥಿಯಾಗಿದ್ದ ರಾಘವೇಂದ್ರ ಕೊಣ್ಣೂರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಕಾಲೇಜ್ ಗೆ ಹೋಗಲು ಬಸ್ ಹತ್ತುವ ವೇಳೆ ಈ ಘಟನೆಯೂ ಸಂಭವಿಸಿದೆ. ರಾಘವೇಂದ್ರ (21) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಬಸ್ ನ ಮುಂಭಾಗದ ಬಾಗಿಲು ಹತ್ತಲು ಹೋಗಿದ್ದ ಮೃತ ರಾಘವೇಂದ್ರನು ಬಸ್ ಫುಲ್ ರಶ್ ಇದ್ದ ಕಾರಣ ಜಾರಿ ಬಿದ್ದಿದ್ದಾನೆ. ರಾಘವೇಂದ್ರನ ತಲೆಯ ಮೇಲೆ ಬಸ್ಸು ಹಾಯ್ದು ಹೋಗಿದ್ದು, ಸ್ಥಳದಲ್ಲೇ ವಿದ್ಯಾರ್ಥಿ ರಾಘವೇಂದ್ರ ಮೃತ ಪಟ್ಟಿದ್ದಾನೆ. ಸ್ಥಳಕ್ಕೆ ನರಗುಂದ ಪೊಲೀಸ್ ರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.