ಮಂಚಿ ವಿ.ಹಿಂ.ಪ, ಬಜರಂಗದಳದಿಂದ ಗೋಪೂಜೆ, ಸಾಧಕರಿಗೆ ಗೌರವಾರ್ಪಣೆ
ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಾತೃಶಕ್ತಿ ದುರ್ಗಾ ವಾಹಿನಿ ಮಂಚಿ ಘಟಕದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಗೋಪೂಜೆ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯ ಅಧ್ಯಕ್ಷರಾದ ಟಿ ಜಿ ರಾಜಾರಾಮ ಭಟ್ ವಹಿಸಿದ್ದರು.
ಒಡಿಯೂರಿನ ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವಚನನೀಡಿದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಉದ್ಯಮಿಗಳಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಲ. ಚಂದ್ರಹಾಸ ರೈ ಬಾಲಾಜಿ ಬೈಲು ಕಪಣಮುಗೇರಗುತ್ತು, ಬಜರಂಗದಳ ಕಲ್ಲಡ್ಕ ಪ್ರಖಂಡ ಸಂಚಾಲಕರಾದ ಅಮಿತ್ ಕಲ್ಲಡ್ಕ, ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾದ ಉದಯಕುಮಾರ ಭಟ್ ಖಂಡಿಗ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇವೇಳೆ ನಿವೃತ್ತ ಮುಖ್ಯೋಪಾಧ್ಯಾಯಿನಿ ದೇವಕಿ ಎಚ್ ಮೋಂತಿಮಾರು, ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕಿ ಹಿಂದಿ ರತ್ನ ಪುರಸ್ಕೃತರಾದ ಶಾಂತಾ ಎಸ್, ರಾಜ್ಯಮಟ್ಟದ ಯೋಗಪಟು ಕೆ ಎಸ್ ಚಿಂತನಾ ಆಚಾರ್ಯ ಕುಕ್ಕಾಜೆ ಹಾಗೂ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎರಡು ಬಾರಿ ವಿಜೇತರಾಗಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಕು. ಸಾನ್ವಿ ಕಾಮತ್ ಪುಚ್ಚೆಕೆರೆ ಅವರನ್ನು ಗೌರವಿ ಸಲಾಯಿತು.
ವಿಶ್ವ ಹಿಂದೂ ಪರಿಷತ್ ಮಂಚಿ ಘಟಕದ ಅಧ್ಯಕ್ಷರಾದ ರಮೇಶ್ ರಾವ್ ಪತ್ತುಮುಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಜೆ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಶಿವರಾಮ ರೈ ವಂದಿಸಿದರು. ಪುಷ್ಪ ರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.