Published On: Tue, Nov 12th, 2024

ಬಡಗಬೆಳ್ಳೂರು ಗ್ರಾ.ಪಂ.ಗೆ ಉಪಚುನಾವಣೆ

ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾ.ಪಂ.ನಲ್ಲು ನಾನಾ ಕಾರಣಕ್ಕೆ ತೆರವಾಗಿರುವ ಸ್ಥಾನಗಳಿಗೂ ನ.23 ರಂದು ಉಪಚುನಾವಣೆ  ನಡೆಯಲಿದೆ.

ಬಡಗಬೆಳ್ಳೂರು 1 ನೇ ವಾರ್ಡ್ ಗೆ ಉಪ ಚುನಾವಣೆ ನ.23ರಂದು ಶನಿವಾರ ನಡೆಯಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೋಹನದಾಸ ಕೊಟ್ಟಾರಿ ನ.8ರಂದು ನಾಮಪತ್ರ ಸಲ್ಲಿಸಿದರು. ಚುಣಾವಣಾಧಿಕಾರಿ ಸಮಾಜ ಕಲ್ಯಾಯಾಣ ಇಲಾಖಾಧಿಕಾರಿ ಸುನೀತಾ ನಾಮಪತ್ರ ಸ್ವೀಕರಿಸಿದರು. ಬಡಗಬೆಳ್ಳೂರು ಗ್ರಾಂ ಪಂ. ಕಾರ್ಯದರ್ಶಿ ರೀಟಾ ಇದ್ದರು. ಈ ಸಂದರ್ಭದಲ್ಲಿ ದೇವಪ್ಪ ಪೂಜಾರಿ ಬಾಳಿಕೆ, ರಮೇಶ್ ಪೂಜಾರಿ ಬಟ್ಟಾಜೆ, ಸವಿತಾ ಎನ್ ಶೆಟ್ಟಿ ಬೂತ್ ಅಧ್ಯಕ್ಷ ದಿನೇಶ್ ಬಟ್ಟಾಜೆ ಜಯಂತ್ ತಂಬಡಗುಡ್ಡೆ ಮಮತಾ ಪದ್ಮನಾಭ ಪೂಜಾರಿ ಶ್ರೀನಿವಾಸ ಅಂಬೋಡಿಮಾರು ಮುಂತಾದವರು ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪಂ.ನ 3 ಸ್ಥಾನ, ಪಂಜಿಕಲ್ಲು 2, ಮಂಚಿ, ಪೆರ್ನೆ, ಚೆನ್ನೈತ್ತೋಡಿ, ಸಜೀಪಮೂಡ, ಅಮ್ಟಾಡಿ, ಗ್ರಾ.ಪಂ.ಗಳಿಗೆ ಉಪಚುನಾವಣೆ ನಡೆಯಲಿದ್ದು,ಇಲ್ಲಿಯು ಆಯಾಯ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter