ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ಮಾರುತಿನಗರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ( ರಿ.)  ಇದರ ಶ್ರೀ ವೀರಮಾರುತಿ ಮಂದಿರದ 16 ನೇ ವರ್ಷದ ಪ್ರತಿಷ್ಟಾ ವರ್ಧಂತ್ಯೋತ್ಸವ ಕಾರ್ಯಕ್ರಮವು ನರಿಕೊಂಬು ವೇದಮೂರ್ತಿ ಶ್ರೀ ರಾಜಗೋಪಾಲಾಚಾರ್  ಇವರ ಪೌರೋಹಿತ್ಯದಲ್ಲಿ ನೆರವೇರಿತು.


ಶ್ರೀ ಮಾರುತಿ ದೇವರಿಗೆ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮ  ಜರಗಿತು.

ಕಾರ್ಯಕ್ರಮದಲ್ಲಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ( ರಿ.) ಮಾರುತಿನಗರ ನರಿಕೊಂಬು ಇದರ ಅಧ್ಯಕ್ಷರಾದ ಹರೀಶ ಎನ್, ಪದಾಧಿಕಾರಿಗಳು, ಸದಸ್ಯರುಗಳು,ಶ್ರೀ ವೀರಮಾರುತಿ ಮಹಿಳಾ ಮಂಡಳಿ ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.  ಸಾರ್ವಜನಿಕ ಅನ್ನಸಂತರ್ಪಣೆಯು ಜರಗಿತು. 

By Suddi9

Leave a Reply

Your email address will not be published. Required fields are marked *