ಪುರಸಭೆಗೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಬಂಟ್ವಾಳ: ಎಂಟು ತಿಂಗಳ ಅವಧಿಗಾಗಿ ಬಂಟ್ವಾಳ ಪುರಸಭೆಯ ವಾಡ್೯ 2 ಕ್ಕೆ ತೆರವಾಗಿರುವ ಒಂದು ಸ್ಥಾನಕ್ಕೆ ನ.23 ರಂದು ನಡೆಯುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಲ್. .ಇಂದ್ರೇಶ್ ಪೂಜಾರಿ ಅವರು ಸೋಮವಾರ ಪಕ್ಷದ ಮುಖಂಡರು,ಕಾರ್ಯಕರ್ತರೊಂದಿಗೆ ಅಗಮಿಸಿ ಪುರಸಭೆಯಲ್ಲಿ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿಯಾದ ಪ್ರಾದೇಶಿಕ ಬಂಟ್ವಾಳ ವಲಯ ಅರಣ್ಯಾಧಿಕಾರಿಸುನೀಲ್ ಡಿಸೋಜ ಅವರು ನಾಮಪತ್ರ ಸ್ವೀಕರಿಸಿದರು. ಉಪಚುನಾವಣಾಧಿಕಾರಿ ತಾ.ಪಂ.ನ ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಹಾಗೂ ಪುರಸಭಾ ಮೆನೇಜರ್ ರಜಾಕ್ ಸಹಕರಿಸಿದರು.ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಎ ಗೋವಿಂದ ಪ್ರಭು,ಹರಿಪ್ರಸಾದ್ ಭಂಡಾರಿಬೆಟ್ಟ ,ನಿಕಟಪೂರ್ವಸದಸ್ಯ ಗಂಗಾಧರ ಪೂಜಾರಿ, ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಅಭ್ಯರ್ಥಿಯ ಜೊತೆಗಿದ್ದರು.

ಹಾಗೆಯೇ ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ,ಮಾಜಿ ಸದಸ್ಯರಾದ ಸುರೇಶ್ ಕುಲಾಲ್,ಜನಾರ್ಧನ ಬೊಂಡಾಲ,ಪುರಸಭಾ ಸದಸ್ಯೆಯರಾದ ಶಶಿಕಲಾ,ದೇವಕಿ,ರೇಖಾ ಪೈ, ಮೀನಾಕ್ಷಿಗೌಡ,ಪಕ್ಷದ ಮುಖಂಡರಾದ ರಾಮದಾಸ್ ಬಂಟ್ವಾಳ, ದಿನೇಶ್ ಅಮ್ಟೂರು,ಸುದರ್ಶನ್ ಬಜ, ರಮಾನಾಥ ಪೈ,ಭಾಸ್ಕರ ಟೈಲರ್,ಸತೀಶ್ ಪಲ್ಲಮಜಲು ಸಹಿತ ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ ನಿಂದ ಪುರುಷೋತ್ತಮ ಬಂಗೇರ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಇವರಿಬ್ಬರೊಳಗೆ ನೇರ ಸ್ಪರ್ಧೆ ನಡೆಯಲಿದೆ.
ಪುರಸಭೆಯ ವಾಡ್೯ 2 ಮಂಡಾಡಿ, ಗಿರಿಗುಡ್ಡೆ, ಜಕ್ರಿಬೆಟ್ಟುವಿನ ಒಂದುಭಾಗ, ಆಗ್ರಾರ್,ಪೊಣ್ಣಂಗಿಲ ವ್ಯಾಪ್ತಿಯ ಮತದಾರರನ್ನು ಹೊಂದಿದೆ.
ಗ್ರಾ.ಪಂ.ಗಳಿಗೆ ಉಪಚುನಾವಣೆ:
ನಾನಾ ಕಾರಣಕ್ಕೆ ಗ್ರಾ.ಪಂ.ನಲ್ಲು ತೆರವಾಗಿರುವ ಸ್ಥಾನಗಳಿಗೂ ನ.23 ರಂದೇ ಉಪಚುನಾವಣೆ ನಡೆಯಲಿದೆ.
ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪಂ.ನ 3 ಸ್ಥಾನ, ಪಂಜಿಕಲ್ಲು 2, ಮಂಚಿ, ಪೆರ್ನೆ, ಚೆನ್ನೈತ್ತೋಡಿ, ಸಜೀಪಮೂಡ, ಅಮ್ಟಾಡಿ, ಬಡಗಬೆಳ್ಳೂರು ಗ್ರಾ.ಪಂ.ಗಳ ತಲಾ 1 ಸ್ಥಾನ ಗಳಿಗೆ ಉಪಚುನಾವಣೆ ನಡೆಯಲಿದ್ದು,ಇಲ್ಲಿಯು ಆಯಾಯ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.