Published On: Mon, Nov 11th, 2024

ನೇಲ್ಯಪಲ್ಕೆ ಜನತಾ ಕಾಲೋನಿಯಲ್ಲಿ “ಸಾಮರಸ್ಯದ ತುಡರ್ “ಕಾರ್ಯಕ್ರಮ

ಬಂಟ್ವಾಳ: ಸಾಮರಸ್ಯ ವಿಭಾಗ ಬಂಟ್ವಾಳ ತಾಲೂಕು ಮತ್ತು ತುಡರ್ ಗ್ರಾಮ ಸಮಿತಿ ಅಜಿಲಮೊಗರು, ಮಣಿನಾಲ್ಕೂರು ವತಿಯಿಂದ ಬಂಟ್ವಾಳ ತಾ.ನ ನೇಲ್ಯಪಲ್ಕೆ ಜನತಾ ಕಾಲೋನಿಯಲ್ಲಿ ಸಾಮರಸ್ಯದ ತುಡರ್ ಕಾರ್ಯಕ್ರಮ ನಡೆಯಿತು. ಸಾಮರಸ್ಯ ಗತಿವಿಧಿಯ ಮಂಗಳೂರು ವಿಭಾಗ ಸಹ ಸಂಯೋಜಕರಾದ ಶಿವಪ್ರಸಾದ್ ಮಲೆಬೆಟ್ಟು ಮಾತನಾಡಿ,  ಹಿಂದೂ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ, ಸಮಾಜವನ್ನು ಧಾರ್ಮಿಕ, ಆಧ್ಯಾತ್ಮಿಕ, ಆರ್ಥಿಕವಾಗಿ ಮೇಲೆತ್ತುವಂತಹ ಕೆಲಸವನ್ನು ಸಂಘದ ಗತಿವಿಧಿಗಳು ನಡೆಸಿಕೊಂಡು ಬಂದಿದೆ.


ಕುಟುಂಬದ ಮೌಲ್ಯವನ್ನು ಹೆಚ್ಚಿಸುವ ಕುಟುಂಬ ಪ್ರಬೋಧನ್, ಗೋ ಸೇವೆ ಮತ್ತು ಗೋ ಆಧಾರಿತ ಸಾವಯುವ ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಗೋ ಸೇವಾ ವಿಭಾಗ, ಪರಿಸರದ ಜಾಗೃತಿಗಾಗಿ ಪರ್ಯಾವರಣ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಮವಿಕಾಸ, ಸಾಮಾಜಿಕ ಪಿಡುಗು ಆಗಿರುವಂತಹ ಮತಾಂತರದ ನಿರ್ಮೂಲನೆಗಾಗಿ ಧರ್ಮ ಜಾಗರಣ, ಸಾಮರಸ್ಯ ಜಾಗೃತಿಗೊಳಿಸಲು ಸಾಮರಸ್ಯ ಗತಿವಿಧಿ ನಿರಂತರವಾಗಿ ನಡೆಸಿಕೊಂಡು ಬಂದಿದೆ ಎಂದರು.


ಹಿಂದೂ ಸಮಾಜದ ಮೇಲು-ಕೀಳು ಜಾತೀಯತೆಯನ್ನು ತೊಡೆದುಹಾಕಿ ಹಿಂದೂ ಸಮಾಜವನ್ನು ಸಂಘಟಿಸುವ ಕೆಲಸವನ್ನು ಸಂಘ ನಿರಂತರವಾಗಿ  ಮಾಡಿಕೊಂಡು ಬರುತ್ತಿದ್ದು, ಹಿಂದೂ ಒಂದು ಬಂಧು ಎನ್ನುವ  ಘೋಷಣೆಯನ್ನು ಸಾಮರಸ್ಯ ತುಡರ್ ಕಾರ್ಯಕ್ರಮದ ಮುಖಾಂತರ ಕೃತಿ ರೂಪಕ್ಕೆ ಇಳಿಸುವ ಕೆಲಸವನ್ನು ಸಾಮರಸ್ಯ ವೇದಿಕೆ ಮಂಗಳೂರು ವಿಭಾಗದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದರು.
ಪೊಳಲಿ ಶ್ರೀರಾಮಕೃಷ್ಣ ತಪೋವನ  ಸ್ವಾಮಿ ವಿವೇಕ ಚೈತ್ಯನಾನಂದ ಸ್ವಾಮೀಜಿಯವರು ಸಾಮರಸ್ಯದ ಸಂದೇಶ ವನ್ನಿತ್ತು ಆಶಿರ್ವಚನ ನೀಡಿದರು. ಸಾಮರಸ್ಯ ಗತಿವಿದಿಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಯೋಜಕರಾದಭರತ್ ಮಂಜನಾಡಿ,ಸುವರ್ಣ ಸಾಂಸ್ಕತಿಕ ಪ್ರತಿಷ್ಠಾನದ ಅಧ್ಯಕ್ಷರಾದ  ಸಂಪತ್ ಸುವರ್ಣ ಬೆಳ್ತಂಗಡಿ, ವಿಶ್ವಹಿಂದು ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ಸೇವಾ ಬಸ್ತಿಯ ಹಿರಿಯರಾದಕುಂಜಿರ ಮುಗೇರ ತಿಂಗಳಾಡಿ, ಪ್ರಮುಖರಾದಲಿಂಗಪ್ಪ ಮುಗೇರ ನೇಲ್ಯ ಪಲ್ಕೆ, ಕುಸುಮಾಕರ ಶೆಟ್ಟಿ ಕೂರ್ಯಾಳ, ಪರಮೇಶ್ವರ ಪೂಜಾರಿ ನೇಲ್ಯಪಲ್ಕೆ ಮುಂತಾದವರು ಉಪಸ್ಥಿತರಿದ್ದರು. 


ತುಡರ್ ಗ್ರಾಮ ಸಮಿತಿಯ ಪ್ರಮುಖರಾದ ಸರಪಾಡಿ ಅಶೋಕ್ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು.ಪುರುಷೋತ್ತಮ ಪೂಜಾರಿ ಮಜಲು ವಂದಿಸಿದರು.ಸಂತೋಷ್ ಕುಲಾಲ್ ನೇಲ್ಯ ಪಲ್ಕೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕು ಮೊದಲು ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದಿಂದ ದೀಪ ಪ್ರಧಾನ ಮಾಡಿ “ತುಡರ್” ದೀಪದೊಂದಿಗೆ ನೇಲ್ಯಪಲ್ಕೆ ಜಂಕ್ಷನ್ ನಿಂದ ಗೋಮಾತೆ, ಕುಣಿತ ಭಜನೆಯೊಂದಿಗೆ ಕಾಲೋನಿಯ ವರೆಗೆ ಶೋಭಾಯಾತ್ರೆ ನಡೆದು ಗೋಪೂಜೆ ನೆರವೇರಿಸಲಾಯಿತು. ನಂತರ ಸ್ವಾಮೀಜಿಯವರು ಪ್ರಮುಖರೊಂದಿಗೆ ಸ್ಥಳೀಯ ಮನೆಗಳಿಗೆ ಭೇಟಿ ನೀಡಿ ತುಡರ್ ದೀಪದಿಂದ ಮನೆಯ ದೀಪ ಹಚ್ಚಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ, ಸುಡು ಮದ್ದು ಪ್ರದರ್ಶನ ನಡೆಸಲಾಯಿತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter