ವಿಜಯ ಜಿ.ಜೈನ್ ನಿಧನ
ಬಂಟ್ವಾಳ: ಹಿರಿಯ ಜೈನ ಲೇಖಕಿ,ತುಳು, ಕನ್ನಡ ಭಾಷಾ ಸಾಹಿತಿ, ಸುರ್ಯಗುತ್ತು ಮನೆತನದ ಹಿರಿಯರಾದ ಬಂಟ್ವಾಳ ತಾಲೂಕಿನ ಇರ್ವತ್ತೂರು ಬೀಡಿನ ವಿಜಯ ಜಿ. ಜೈನ್( 83) ಅವರು ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಮಕ್ಕಳಾದ ಹಿರಿಯ ಪತ್ರಕರ್ತ ಐ.ಬಿ. ಸಂದೀಪ್ ಕುಮಾರ್, ಇರ್ವತ್ತೂರು ಮಾಗಣೆ ಗುರಿಕಾರ ಐ.ಬಿ. ಸಂಜೀತ್ ಕುಮಾರ್ ಮತ್ತು ಮಿಜಾರು ಅನಂತಮ್ ಮನೆಯ ಶಾಲಿನಿ ನವೀನ್ ಕುಮಾರ್ ಹಾಗೂಆಪಾರ ಬಂಧು ಬಳಗವನ್ನು ಅಗಲಿದ್ದಾರೆ.ಅವರು ಎಸ್.ಡಿ.ಎಂ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಸ್.ಸತೀಶ್ಚಂದ್ರ ಸುರ್ಯ ಗುತ್ತು ಅವರ ಹಿರಿಯ ಸಹೋದರಿಯು ಆಗಿದ್ದಾರೆ.
ಅವರು ಜೈನ ‘ಭಕ್ತಿ ಸುಮನಾಂಜಲಿ, ಗೋಮಟೇಶ ಚರಿತೆ ಸಾಂಗತ್ಯ, ತುಳು ಭಾಷಾಂತರಿತ ಬೃಹತ್ ಸ್ವಯಂಭು ಸ್ತೋತ್ರ, ಜೈನ ಧರ್ಮದ ಧರ್ಮ ಗ್ರಂಥ ಮೋಕ್ಷ ಶಾಸ್ತ್ರ ಅವರ ಪ್ರಕಟಿತ ಕೃತಿಗಳಾಗಿದ್ದು,ಜಿನ ಸಹಸ್ರ ನಾಮ, ಪದ್ಮ ಪುರಾಣ ಅವರ ಅಪ್ರಕಟಿತ ಕೃತಿಗಳಾಗಿದೆ.
ಇದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದ ಅವರು ಕೆಲ ಕಾಲ ಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಸಂತಾಪ:
ವಿಜಯ ಜಿ. ಜೈನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮೂಡಬಿದ್ರೆಶ್ರೀ ದಿಗಂಬರ ಜೈನಮಠದ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀ
ಅಗಲಿದ ಅವರ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ ಅವರ ಅಗಲುವಿಕೆ ಯಿಂದ ಆಗಿರುವ ದುಃಖ ವನ್ನು ಸಹಿಸುವ ಶಕ್ತಿಯನ್ನು ಜಿನೇಂದ್ರ ಭಗವಂತ ಜಿನ ಶಾಸನ ದೇವತೆಗಳು ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿ ಹರಸಿದ್ದಾರೆ.