ನಾವೂರು ನೂತನ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳ ತಾಲೂಕಿನ ನಾವೂರುಸರಕಾರಿ ಹಿ.ಪ್ರಾ ಶಾಲೆಗೆ ಎಂ.ಆರ್.ಪಿ.ಎಲ್ ನ ಸಿಎಸ್ಆರ್ ನಿಧಿಯಿಂದ ಮಂಜೂರಾದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕಟ್ಟಡಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರೆವೇರಿಸಿ,ಉತ್ತಮ ಗುಣಮಟ್ಟದಿಂದ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂಧರ್ಭದಲ್ಲಿ ನಾವೂರು ಗ್ರಾ. ಪಂ.ಅಧ್ಯಕ್ಷರಾದ ಇಂದಿರಾ, ಪಂಚಾಯತ್ ಸದಸ್ಯರಾದ ವಿಜಯ, ತ್ರಿವೇಣಿ, ಜನಾರ್ಧನ, ಮಾಜಿ ಪಂ.ಸದಸ್ಯರಾದ ಸದಾನಂದ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸತೀಶ್,ಮಾತೃ ಭೂಮಿ ಸೇವಾ ಸಂಸ್ಥೆ ಅಧ್ಯಕ್ಷರಾದ ಸಂತೋಷ್, ಪದಾಧಿಕಾರಿ ಸುರೇಶ್ ಎಸ್ ನಾವೂರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.