ಎಡನೀರು ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿ ಜತೆ ಮಾತುಕತೆ ನಡೆಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್
ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಎಡನೀರು ಮಠಕ್ಕೆ ನೀಡಿ, ಸ್ವಾಮೀಜಿ ಜತೆಗೆ ಮಾತುಕತೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕೇರಳದ ಕಾಸರಗೋಡಿನಲ್ಲಿರುವ ಎಡನೀರು ಮಠ ಕಟೀಲ್ ಭೇಟಿ ನೀಡಿದ್ದಾರೆ. ಬೋವಿಕಾನ ಎಂಬಲ್ಲಿ ಸ್ವಾಮೀಜಿ ಕಾರು ತಡೆದು ದಾಳಿ ನಡೆಸಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿಂತೆ
ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಜೊತೆ ನಳಿನ್ ಕುಮಾರ್ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಕೇರಳದ ಕಮ್ಯುನಿಸ್ಟ್ ಸರ್ಕಾರದ ವಿರುದ್ದ ನಳಿನ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಶ್ರೀಗಳ ಕಾರು ತಡೆದು ಕಲ್ಲು ತೂರಾಟ ನಡೆಸಿದ ಘಟನೆ ಖಂಡನೀಯ. ಅನ್ಯಕೋಮಿನ ಯುವಕರ ತಂಡದಿಂದ ಕಾರು ತಡೆದು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬೋವಿಕಾನ ಎಂಬಲ್ಲಿ ಘಟನೆ ನಡೆದಿದೆ. 00 ವರ್ಷಗಳ ಇತಿಹಾಸ ಹೊಂದಿರುವ ಎಡನೀರು ಮಠದ ಸ್ವಾಮೀಜಿಯ ಮೇಲೆ ಈ ಕೃತ್ಯ ಮಾಡಿರುವುದು ಆತಂಕ ಸೃಷ್ಟಿಸಿದೆ ಎಂದು ಹೇಳಿದರು.
ಕೇರಳ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಆರೋಪಿಗಳನ್ನು ಬಂಧಿಸಬೇಕಿತ್ತು.ಆದರೆ ಘಟನೆ ನಡೆದು ಎರಡು ದಿನವಾದ್ರೂ ಆರೋಪಿಗಳ ಬಂಧನ ಆಗಿಲ್ಲ.ಮತಬ್ಯಾಂಕ್ ಹಿಂದೆ ಬಿದ್ದಿರೋ ಕೇರಳದ ಕಮ್ಯುನಿಸ್ಟ್ ಸಿಎಂ ಪಿನರಾಯಿ ವಿಜಯನ್ ಘಟನೆಯನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ.ಕೇರಳ ಗೃಹ ಸಚಿವರು ಕೂಡ ಪ್ರಕರಣದ ತನಿಖೆಗೆ ಆದೇಶ ಮಾಡಿಲ್ಲ.ಇದರಿಂದ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಮತ್ತಷ್ಟು ಘಟನೆ ನಡೆಯಬಹುದು ಎಂಬ ಭಯ ಶುರುವಾಗಿದೆ. ಕಮ್ಯುನಿಸ್ಟ್ ಸರ್ಕಾರ ಮತಾಂಧ ಶಕ್ತಿಗಳ ಹಿಂದೆ ನಡೀತಾ ಇದೆ ಅನಿಸುತ್ತಿದೆ, ಕಾಸರಗೋಡು ಜಿಲ್ಲೆಯಲ್ಲಿ ದೇವಸ್ಥಾನಗಳಿಗೆ ಕಳ್ಳರು ನುಗ್ತಾ ಇದಾರೆ. ಈ ಭಾಗದ ದೇವಸ್ಥಾನಗಳ ಮೇಲೆ ನಿರಂತರ ದಾಳಿ ನಡೀತಾ ಇದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪಿನರಾಯಿ ಸರ್ಕಾರ ಎಡವಿದೆ. ಸ್ವಾಮೀಜಿಗಳ ಜೊತೆ ಇಡೀ ಹಿಂದೂ ಸಮಾಜ ಇದೆ, ಕೈ ಕಟ್ಟಿ ಕುಳಿತುಕೊಳ್ಳೋ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.