Published On: Tue, Nov 5th, 2024

18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕು. ಪ್ರೇಕ್ಷಾ ಆಯ್ಕೆ

ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ವತಿಯಿಂದ ನಡೆಯುವ ತಾಲೂಕು ಮಟ್ಟದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಶಂಭೂರು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಿರ್ಮಿಸಲಾಗುವ ರಾಮಚಂದ್ರ ರಾವ್ ಸಭಾಂಗಣದ ವಿ.ಮ.ಭಟ್ ವೇದಿಕೆಯಲ್ಲಿ ನ. 19 ರಂದು ನಡೆಯಲಿದೆ. ಇನ್ನು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯ ಏಳನೇ ತರಗತಿಯ ವಿದ್ಯಾರ್ಥಿನಿ ಕು. ಪ್ರೇಕ್ಷಾ ಆಯ್ಕೆಯಾಗಿರುತ್ತಾರೆ.

ಪ್ರೇಕ್ಷಾ ಶಂಭೂರು ಗ್ರಾಮದ ಸೀನೆರೆ ಪಾಲು ಮೋಹಿನಿ ಮತ್ತು ಸುಣ್ಣಾಜೆ ದಿನೇಶ್ ರವರ ದ್ವಿತೀಯ ಪುತ್ರಿ. ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮುಂಚೂಣಿ ಹಾಗೂ ಯಕ್ಷಗಾನದಲ್ಲಿಯೂ ಆಸಕ್ತಿ ಹೊಂದಿರುವ ಪ್ರೇಕ್ಷಾ, ಭಕ್ತಿಗೀತೆ ಮತ್ತು ದೇಶಭಕ್ತಿ ಗೀತೆ ಹವ್ಯಾಸವಾಗಿ ಬೆಳೆಸಿ ಕೊಂಡಿದ್ದಾರೆ.

ಇವರು ಶಂಭೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಕಡೆಶಿವಾಲಯದಲ್ಲಿ ಜರಗಿದ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಇವರು ಸ್ವರಚಿಸಿದ ಕವನ “ಬೆಳೆಸಿ ಉಳಿಸಿ” ಕವನವು ಆ ವರ್ಷದ ಸ್ಮರಣ ಸಂಚಿಕೆ “ಲಹರಿ” ಯಲ್ಲಿ ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ.ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ ಬಾಯಾರು, ಕಾರ್ಯದರ್ಶಿ ಪುಷ್ಪಾ ಎಚ್ ಇವರು ಕು. ಪ್ರೇಕ್ಷಾ ಇವರನ್ನು ಅಭಿನಂದಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter