ಖ್ಯಾತ ನಿರ್ದೇಶಕ, ನಟ ಗುರು ಪ್ರಸಾದ್ ನೇಣಿಗೆ ಶರಣು
ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ಸಂಭಾಷಣೆಗಾರ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಕಾರಣದಿಂದಾಗಿ ಬೇಸತ್ತು, ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಹೌದು.. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಸಾವಿಗೆ ಸಾಲ ಕಾರಣ ಎಂದು ಹೇಳಲಾಗಿದೆ.
ಈ ಹಿಂದೆ ನಿರ್ದೇಶಕ ಗುರು ಪ್ರಸಾದ್ ರಂಗನಾಯಕ ಚಿತ್ರ ನಿರ್ದೇಶಿಸಿದ್ದರು.ಈ ಚಿತ್ರ ಹೀನಾಯವಾಗಿ ಸೋತಿತ್ತು. ಇದರ ಬೆನ್ನಲ್ಲೇ ಗುರು ಪ್ರಸಾದ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಚೆಕ್ ಬೌನ್ಸ್ ಕೇಸ್ ವೊಂದರಲ್ಲಿ ಕೋರ್ಟು ಕಚೇರಿ ಅಲಿಯುತ್ತಿದ್ದ ಗುರುಪ್ರಸಾದ್ ಮೇಲೆ ಜಯನಗರದಲ್ಲಿ ಮತ್ತೊಂದು ಕೇಸ್ ದಾಖಲಾಗಿತ್ತು. ಪುಸ್ತಕ ಖರೀದಿ ಮಾಡಿ ಹಣ ನೀಡಿಲ್ಲ ಅಂತಾ ದೂರು ನೀಡಲಾಗಿತ್ತು. ತೀವ್ರ ಆರ್ಥಿಕವಾಗಿ ಸಮಸ್ಯೆ ಎದುರಿಸ್ತಿದ್ದ ಗುರುಪ್ರಸಾದ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗುರುಪ್ರಸಾದ್ ಸಾವಿಗೆ ಇಡೀ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ.