ಸಿದ್ಧಕಟ್ಟೆ: ಕೊಡಂಗೆ ವೀರ-ವಿಕ್ರಮ ಜೋಡುಕರೆ ಸುತ್ತಲೂ ಸಾಲು ಸಾಲು ಹಣತೆ ಬೆಳಗಿಸಿ ದೀಪಾವಳಿ ಆಚರಣೆ
ಸಿದ್ಧಕಟ್ಟೆ : ದೀಪಾವಳಿ ಹಬ್ಬ ನಾಡಿನ ಎಲ್ಲೆಡೆ ಸಂಭ್ರಮ ಕಲೆ ಮಾಡಿತ್ತು. ಕೆಲವೊಂದು ಕಡೆ ಸಾರ್ವಜನಿಕವಾಗಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಇನ್ನು ವಿಶೇಷವಾಗಿತ್ತು. ಇಲ್ಲಿ ಕಂಬಳಕ್ಕೆ ಹೆಚ್ಚಿನ ಮಹತ್ವ ನೀಡುವ ಕಾರಣ, ಕಂಬಳದ ಕರೆಯಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ. ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಸುತ್ತಲೂ ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾರ ರಾತ್ರಿ ಸಾಲು ಸಾಲು ಹಣತೆ ಬೆಳಗಿಸಿ ಕಂಬಳ ಸಮಿತಿ ಗಮನ ಸೆಳೆದಿದೆ.
ಕಳೆದ ವರ್ಷ ಸುಸಜ್ಜಿತ ಕರೆ ನಿರ್ಮಿಸಿ ಯಶಸ್ವಿ ಕಂಬಳ ನಡೆದಿದ್ದು, ಈ ಬಾರಿ ಎರಡನೇ ವರ್ಷದ ಕಂಬಳಕ್ಕೆ ಕರೆ ಸಿದ್ಧಗೊಂಡಿದೆ. ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ, ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಪ್ರಮುಖರಾದ ಬಾಬು ರಾಜೇಂದ್ರ ಶೆಟ್ಟಿ, ಸುರೇಶ ಶೆಟ್ಟಿ ಸಿದ್ಧಕಟ್ಟೆ, ವಸಂತ ಶೆಟ್ಟಿ ಕೇದಗೆ, ರತ್ನಕುಮಾರ್ ಚೌಟ, ಕಿರಣ್ ಕುಮಾರ್ ಮಂಜಿಲ, ರಾಘವೇಂದ್ರ ಭಟ್, ಹರಿಪ್ರಸಾದ್ ಶೆಟ್ಟಿ, ಸಂದೇಶ್ ಶೆಟ್ಟಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಜನಾರ್ದನ ಬಂಗೇರ, ಸಂದೇಶ ಶೆಟ್ಟಿ, ಶಿವಾನಂದ ರೈ, ಸುರೇಶ ಶೆಟ್ಟಿ ಕುತ್ಲೋಡಿ, ಸ್ಥಳದಾನಿ ಓಬಯ ಪೂಜಾರಿ, ಕೊರಗಪ್ಪ ಪೂಜಾರಿ ಮತ್ತಿತರರು ಇದ್ದರು.