ಗೋಲ್ ಗಪ್ಪಾ ಪ್ರಿಯರಿಗೂ ಬೀಗ್ ಶಾಕ್, ಆಹಾರ ಇಲಾಖೆಯಿಂದ ನಿರ್ಬಂಧ ಸಾಧ್ಯತೆ

ಹಾದಿ ಬೀದಿಗಳಲ್ಲಿ ಆಹಾರ ತಿನ್ನುವ ಮುನ್ನ ಎಚ್ಚರ ವಹಿಸಬೇಕು. ಇದೀಗ ಕರ್ನಾಟಕ ಆಹಾರ ಇಲಾಖೆ ಮಹತ್ವ ಆದೇಶ ಹಾಗೂ ವಿಚಾರವನ್ನು ತಿಳಿಸಿದೆ. ಈ ಹಿಂದೆ ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ಈಗಾಗಲೇ ನಿರ್ಬಂಧ ವಿಧಿಸಿದೆ. ಇದೀಗ ಗೋಲ್ ಗಪ್ಪಾ ಮೇಲೆಯೂ ನಿರ್ಬಂಧ ಏರುವಂತಿದೆ. ಇದರಿಂದ ಗೋಲ್ ಗಪ್ಪಾ ಪ್ರಿಯರಿಗೂ ಶಾಕ್ ಆಗುವುದು ಖಂಡಿತ.
ಗೋಲ್ ಗಪ್ಪಾದ ಗುಣಮಟ್ಟದ ಮೇಲೆ ಅನೇಕ ದೂರುಗಳು ಕೇಳಿ ಬಂದ ಕಾರಣ ಗೋಲ್ ಗಪ್ಪಾ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಈಗಾಗಲೇ ದಾಳಿಯನ್ನು ನಡೆಸಿದೆ. ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಗೋಲ್ ಗಪ್ಪಾವನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ರ‍್ಯಾಂಡಮ್ ಆಗಿ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಕಡೆ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಗೋಲ್ ಗಪ್ಪಾಗೆ ಬಳಸುವ ಪೂರಿ ಹೇಗೆ ತಯಾರು ಮಾಡುತ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ.