ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಾಡಬೆಟ್ಟು ಶಾಲೆಯಲ್ಲಿ ಶ್ರಮದಾನ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ನಡೆಸಲಾಯಿತು. ಶೌರ್ಯ ತಂಡದ ಸದಸ್ಯರು ಶಾಲೆಯ ಆವರಣ ಸುತ್ತಮುತ್ತ ಬೆಳೆದಂತ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛ ಪಡಿಸಿದರು.
ಶೌರ್ಯ ತಂಡದ ಘಟಕ ಪ್ರತಿನಿಧಿ ಪ್ರವೀಣ, ಸಂಯೋಜಕಿ ರೇಖಾ ಪಿ,ಸದಸ್ಯರಾದ ಸಂಪತ್ ಶೆಟ್ಟಿ ಮಹಾಬಲ ರೈ ನಾರಾಯಣ್ ಶೆಟ್ಟಿ, ನಾರಾಯಣ ಪೂಜಾರಿ,ಅಶೋಕ ಬೊಲ್ಮಾರು, ಅಶೋಕ ಹಾರೊದ್ದು, ಲಕ್ಷ್ಮಣ,ರೋಹಿತ್ ಮೋಹನಂದ, ಶಶಿಕಲಾ ವಿನೋದ,ಪ್ರಿಯಾಂಕ,ವಸಂತ ಕಾಡಬೆಟ್ಟು ಶಾಲೆಯ ಶಿಕ್ಷಕಿಯರಾದ ಹರಿಣಾಕ್ಷಿ, ರತ್ನಾವತಿ, ಉಪಸ್ಥಿತರಿದ್ದರು.
ಶ್ರಮದಾನಕ್ಕೆ ಬೇಕಾದ ವ್ಯವಸ್ಥೆಯಲ್ಲಿಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಜಾನನ ಭಟ್, ಸದಸ್ಯರಾದ ಲೋಕೇಶ್ ಕೆ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಪ್ರಮೋದ್ ಕುಮಾರ್ ರೈ ವಿನ್ಸೆಂಟ್ ಮಧ್ವ,ನಾರಾಯಣ ಪೂಜಾರಿ ಅಲಂಪುರಿ ಸಹಕರಿಸಿದರು.