ಕೂಟ ಮಹಾಜಗತ್ತು ಬಂಟ್ವಾಳ ಘಟಕದ ಸಭೆ
ಬಂಟ್ವಾಳ: ಕೂಟ ಮಹಾಜಗತ್ತು ಬಂಟ್ವಾಳ ಘಟಕದ ಅರ್ಧ ವಾರ್ಷಿಕ ಸಭೆಯು ಸಜೀಪಮುನ್ನೂರು ಶಿವರಾಮ ಮಯ್ಯ ಅವರ ನಿವಾಸದಲ್ಲಿ ಅಧ್ಯಕ್ಷರಾದ ಕೆ. ರಮೇಶ್ ಹೂಳ್ಳ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಸಾಮೂಹಿಕ ಶ್ರೀ ಲಕ್ಷ್ಮಿ ಅಷ್ಟೋತ್ತರ ಶತನಾಮ, ಶ್ರೀ ವಿಷ್ಣು ಸಹಸ್ರನಾಮ ಪಠಣ ಹಾಗೂ ಭಜನಾ ಸತ್ಸಂಗ ಶ್ರೀದೇವಿ ಸ್ತೋತ್ರ ಪಠಣದೊಂದಿಗೆ ನಡೆಯಿತು.
ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಗತ್ ಮಂದಿರದಲ್ಲಿ ಶ್ರೀ ರಾಮ ಜನ್ಮಭೂಮಿ ಕ್ಷೇತ್ರ ದರ್ಶನದ ಪೂರ್ವಭಾವಿಯಾಗಿ ಕೂಟ ಮಹಾ ಜಗತ್ತು ಬಂಟ್ವಾಳ ಘಟಕದ ವತಿಯಿಂದ ಜರಗುವ ಶ್ರೀರಾಮ ನಾಮ ತಾರಕ ಜಪ ಯಜ್ಞ ಕಾರ್ಯಕ್ರಮಕ್ಕೆ ಸಹಕರಿಸುವಂತೆಯು ಕೋರಲಾಯಿತು.
ಅದೇರೀತಿ ಅ. 26 ಮತ್ತು 27ರಂದು ಚಿತ್ರಾಪುರ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜರಗುವ ಗಾಯತ್ರಿಯಜ್ಞ ಕಾರ್ಯಕ್ರಮದಲ್ಲಿಯು ಬಂಟ್ವಾಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಯಿತು.
ಸಭೆಯಲ್ಲಿ ಪೊಳಲಿ ವೆಂಕಪ್ಪಯ್ಯ ಭಟ್, ರಾಮಕೃಷ್ಣ ರಾವ್, ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ವಿದ್ವಾನ್ ಡಾ ಸೋಮಶೇಖರ ಮಯ್ಯ,ನಿವೃತ್ತ ಅಧ್ಯಾಪಕ ವೇದಾನಂದ ಕಾರಂತ,ನಿವೃತ್ತ ಸೇನಾನಿ ವಸಂತ ರಾವ್, ನಿಕಟ ಪೂರ್ವ ಅಧ್ಯಕ್ಷ ಜಗದೀಶ ಹೊಳ್ಳ, ನರೇಶ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.