ಪಿಪಿಸಿ ಸಂಧ್ಯಾ ಕಾಲೇಜು: ನವರಾತ್ರಿ ಆಚರಣೆ
ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ಮಹಿಳಾ ಘಟಕದ ವತಿಯಿಂದ ಕಾಲೇಜಿನಲ್ಲಿ ನವರಾತ್ರಿ ಆಚರಣೆ ನಡೆಯಿತು.ದೇವಿಯ ಆರಾಧನೆಯೊಂದಿಗೆ ಸಂಭ್ರಮದಿಂದ ದಾಂಡಿಯಾ ನೃತ್ಯ ಮಾಡುವ ಮೂಲಕ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಅಜಿತ್ ಕುಮಾರ್ ಅವರು ಮಾತನಾಡಿ ನವರಾತ್ರಿ ಹಬ್ಬದ ಪ್ರಾಮುಖ್ಯತೆ ಮತ್ತು ಧಾರ್ಮಿಕ ವಿಶೇಷತೆಯ ಕುರಿತು ತಿಳಿಸಿದರು.ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ವಿನಾಯಕ್ ಪೈ,ಮಹಿಳಾ ಘಟಕದ ಸಂಯೋಜಕಿ ಲವೀಟಾ ಡಿಸೋಜ,ನಾಯಕಿ ಅಕ್ಷಿತಾ ಸುವರ್ಣ ಉಪಸ್ಥಿತರಿದ್ದರು.ಸ್ವಪ್ನ ಸ್ವಾಗತಿಸಿ,ಸಂಜನಾ ಧನ್ಯವಾದವಿತ್ತರು.
ಕುಮಾರಿ ರಾನಿಯ ಕಾರ್ಯಕ್ರಮ ನಿರೂಪಿಸಿದರು.