ಬಿ.ಸಿ.ರೋಡು ವನದುರ್ಗೆ ಕ್ಷೇತ್ರಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ
ಬಂಟ್ವಾಳ: ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾಶಿವರಾಜ್ ಕುಮಾರ್ ಅವರು ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗೆ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ದೇವರದರ್ಶನ ಪಡೆದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಪಾಂಡುರಂಗ ಪ್ರಭು ಅವರು ಶಿವರಾಜ್ ದಂಪತಿಯನ್ನುಈ ಸಂದರ್ಭದಲ್ಲಿಗೌರವಿಸಿದರು.ಗೀತಾಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾಶಿವರಾಜ್ ಕುಮಾರ್ ಅವರ ನಿರ್ಮಾಣದ ನಟ ಶಿವರಾಜ್ ಕುಮಾರ್ ಅಭಿನಯದ ಹೊಸ ಚಲನಚಿತ್ರ “ಬೈರತಿ ರಣಗಲ್ ” ನ.15 ರಂದು ಕರ್ನಾಟಕ ದದ್ಯಾಂತ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಯಶಸ್ವಿಯಾಗಬೇಕು ಎಂಬ ಸಂಕಲ್ಪದಿಂದ ಈ ವನದುರ್ಗಾ ದೇವಿಗೆ ದಂಪತಿ ಸಮೇತ ಅಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಅನ್ನಪ್ರಸಾದ ಸ್ವೀಕರಿಸಿ, ಇಲ್ಲಿಂದ ಕುತ್ತಾರು ಕೊರಗಜ್ಜ ದೈವದ ಆದಿಸ್ಥಳಕ್ಕೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ” ಭೈರತಿರಣಗಲ್” ಚಿತ್ರ ಕನ್ನಡ,ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಪಂಚ ಭಾಷೆಯಲ್ಲಿ ಪ್ರದರ್ಶನವಾಗಲಿದ್ದು, ನ.15 ಚಲನಚಿತ್ರ ತೆರೆಕಾಣಲಿದೆ.ಈಗಾಗಲೇ ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ಅ.20 ರಂದು ಟೀಸರ್ ಬಿಡುಗಡೆಯಾಗಲಿದೆ.
ಇವರೊಂದಿಗೆ ಚಲನ ಚಿತ್ರ ನಿರ್ಮಾಪಕರುಗಳಾದ ಕೆ.ಪಿ.ಶ್ರೀನಾಥ್, ರಾಜೇಶ್ ಭಟ್, ಕೀರ್ತನ್ ಪೂಜಾರಿ, ಶಿವರಾಜ್ ಕುಮಾರ್ ಅವರ ಸಂಬಂಧಿ ನಟರಾಜ್ , ಸ್ನೇಹಿತರಾದ ವಿಜಯಪ್ರಸಾದ್, ಶೇಖರ್,ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರ ಪ್ರೀತಮ್ ಶೆಟ್ಟಿ, ಗಾಯಕ ಜಿತೇಶ್ ಕುಮಾರ್ ಉಪಸ್ಥಿತರಿದ್ದರು.