ಪಲ್ಲಿಪಾಡಿ ನಾಟಿ ವೈದ್ಯ ಬಾಲಚಂದ್ರ ಶೆಟ್ಟಿ ನಿಧನ
ಬಂಟ್ವಾಳ: ಕರಿಯಂಗಳ ಗ್ರಾ.ಪಂ.ಮಾಜಿ ಸದಸ್ಯ, ಪೊಳಲಿ ಸಮೀಪದ ಪಲ್ಲಿಪಾಡಿ ನಿವಾಸಿ ಬಾಲಚಂದ್ರ ಶೆಟ್ಟಿ(70) ಅವರು ಅ. ೧೪ರಂದು ಅಸೌಖ್ಯದಿಂದ ನಿಧನ ಹೊಂದಿದರು, ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದು, ಕರಿಯಂಗಳ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ನಾಟಿ ವೈದ್ಯರಾಗಿರುವ ಜತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯರಾಗಿ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಸೊಸೆಯಂದಿರನ್ನು ಮೊಮ್ಮಕಳನ್ನು ಅಗಲಿದ್ದಾರೆ
ಬಾಲಚಂದ್ರ ಶೆಟ್ಟಿಯವರ ಬಗ್ಗೆ ಮಾಜಿ ಸಚಿವ ಬಿ. ರಮಾನಾಥ ರೈ ಹಾಗೂ ಅಶ್ವಿನಿ ಕುಮಾರ್ ರೈ ಅವರ ಅನಿಸಿಕೆ ವ್ಯಕ್ತ ಪಡಿಸಿದರು
ಸಂತಾಪ ಸೂಚನೆ: ಬಿ. ರಮಾನಾಥ ರೈ, ಅಶ್ವಿನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಚಂದ್ರಶೇಖರ್ ಭಂಡಾರಿ, ಡಾ. ನವೀನ್, ನರೇಶ್ ಪೂಂಜಾ, ಚಂದ್ರಹಾಸ ಪಲ್ಲಿಪಾಡಿ, ವೆಂಕಟೇಶ್ ನಾವಡ, ಯಶವಂತ ಕೋಟ್ಯಾನ್, ಬಶೀರ್ ಗಾಣೆಮಾರ್,ಅಬೂಬಕ್ಕರ್ ಅಮುಂಜೆ , ರಾಧ ಲೋಕೇಶ್ , ರಾಜು ಕೊಟ್ಯಾನ್, ಪ್ರಸಾದ್, ವೀಣಾ ಉಪೇಂದ್ರ ಆಚಾರ್ಯ, ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಅವರ ಅಂತ್ಯ ಕ್ರಿಯೆಯು ಮಂಗಳವಾರ ಪಲ್ಲಿಪಾಡಿ ಸ್ವಗ್ರಹದ ವಠಾರದಲ್ಲಿ ನಡೆಯಿತು.