ಬಡಗ ಬೆಳ್ಳೂರು ಅತಿಕಾರಿ ಹಿತ್ಲು ಜಗದೀಶ್ ಆಳ್ವ ಹೃದಯಾಘಾತದಿಂದ ನಿಧನ
ಬಡಗ ಬೆಳ್ಳೂರು ಅತಿಕಾರಿ ಹಿತ್ಲು ಜಗದೀಶ್ ಆಳ್ವ (63) ಅವರು ಗುರುಪುರ ಕಾರಮೊಗರುನ ಸ್ವಗ್ರಹದಲ್ಲಿ ಅಕ್ಟೋಬರ್ 11 ರಂದು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಕಂಬಳ ಕ್ಷೇತ್ರದಲ್ಲಿ ಓಟದ ಕೋಣ ಮಾಲಕರಾಗಿ ಅನೇಕ ಜಿಲ್ಲಾ ಪ್ರಶಸ್ತಿ ತಮ್ಮಾದಾಗಿಸಿಕೊಂಡ ಗರಿಮೆ, ಪ್ರಗತಿ ಪರ ಕೃಷಿಕನಾಗಿದ್ದರು. ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ ಗುರುಪುರ ಮುಳೂರು – ಅಡ್ಡೂರು ಕಂಬಳ ಸಮಿತಿ ಕೋಶಾಧಿಕಾರಿ , ಗುರುಪುರ ಬಂಟರ ಸಂಘದ ಸಕ್ರಿಯ ಸದಸ್ಯ, ಆಪ್ರತಿಮಾ ಕಲಾವಿದ ಹೀಗೆ ಹತ್ತು ಹಲವು ಸಂಘ-ಸಂಸ್ಥೆಯಲ್ಲಿ ಸಕ್ರಿಯ ಸದಸ್ಯರಾಗಿದ್ದು, ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ,ಪುತ್ರನನ್ನು ಅಗಲಿದ್ದಾರೆ.