ಮಂಗಳೂರು: ಮಂಗಳೂರು ದಸರಾದ ಮೆರವಣಿಗೆ ಆರಂಭ

ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವತಿಯಿಂದ ನಡೆಯುವ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆ ಇಂದು ಸಂಜೆ ಕುದ್ರೋಳಿಯಿಂದ ಆರಂಭಗೊಂಡಿದೆ.
ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ದರ್ಬಾರ್ ಹಾಲ್ ನಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾಗಣಪತಿಗೆ ಪೂಜೆ ಸಲ್ಲಿಸಿ, ಶಾರದಾ ಮಾತೆಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪೂಜೆ ಯೊಂದಿಗೆ ಮೆರವಣಿಗೆ ಆರಂಭಗೊಂಡಿದೆ.
ಶಾರದೆ ಮತ್ತು ನವ ದುರ್ಗೆಯರ ವಿಗ್ರಹಗಳ ಮೆರವಣಿಗೆ ನಗರದ ಹಲವೆಡೆ ಸಾಗಿ ಬಂದು, ಭಾನುವಾರ ಬೆಳಿಗ್ಗೆ ಸಮಾಪ್ತಿಗೊಳ್ಳಲಿದೆ. ಶೋಭಾಯಾತ್ರೆಯೂ ನಗರದಲ್ಲಿ ಏಳು ಕೀಮೀ ದೂರ ಸಂಚಲಿಸಲಿದ್ದು, 60 ಕ್ಕೂ ಹೆಚ್ಚು ಟ್ಯಾಬ್ಲೋಗಳು ಮೆರವಣಿಗೆಯ ರಂಗನ್ನು ಹೆಚ್ಚಿಸಲಿದೆ. ಈ ಬಾರಿಯ ಶೋಭಾಯಾತ್ರೆಯ ವೇಳೆ ಲಕ್ಷಾಂತರ ಜನರು ಸೇರಲಿದ್ದಾರೆ. ಶೋಭಾಯಾತ್ರೆಯೂ ಸಾಗುವ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು, ಮೆರವಣಿಗೆಗೆ ಮತ್ತಷ್ಟು ರಂಗು ನೀಡಲಿದೆ.