Published On: Sun, Oct 13th, 2024

ಪೊಳಲಿ ಸೇತುವೆ ಬಂದ್, ಮಂಗಳವಾರ ಪ್ರತಿಭಟನೆ ಫಿಕ್ಸ್, ಇಂದಿನ ತುರ್ತು ಸಭೆಯಲ್ಲಿ ನಿರ್ಧಾರ

ಪೊಳಲಿ -ಅಡ್ಡೂರು ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಬಿರುಕು ಬಿಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಂತೆ ಆ ಸೇತುವೆಯಲ್ಲಿ ಘನ ವಾಹನಗಳು ಸಂಚಾರಿದಂತೆ ನಿರ್ಬಂಧ ಹೇರಳಲಾಗಿತ್ತು. ಈಗಾಗಲೇ ಈ ಸೇತುವೆ ಸಾಮರ್ಥ್ಯ ಧಾರಣಾ ಯಂತ್ರ ಬಂದು ಎಲ್ಲ ಪರಿಶೀಲನೆ ಮಾಡಿದೆಯಾದರೂ, ಎರಡು ತಿಂಗಳಾದರೂ ಈ ಸೇತುವೆಯ ಕುರಿತು ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳದ ಕಾರಣ ಅಮ್ಮುಂಜೆ , ಕರಿಯಂಗಳ ,ಬಡಗಬೆಳ್ಳೂರು, ತೆಂಕಬೆಳ್ಳೂರು ಹಾಗೂ ಸುತ್ತಮುತ್ತಲಿನ ನಾಗರಿಕರು ಸೇರಿ ಮಂಗಳವಾರದಂದು ( ಅ. 15) ಪೊಳಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು ಇಂದು ತುರ್ತು ಸಭೆ ನಡೆಯಿತು.

ಜನಪ್ರತಿನಿಧಿಗಳಿಗೆ ಪರ್ಯಾಯ ರಸ್ತೆಯನ್ನು ಕಲ್ಪಿಸಲು ಮನವಿ ಮಾಡಿ ಒಂದು ವಾರ ಕಳೆದರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆ ಮಾಡುವುದಾಗಿ ತೀರ್ಮಾನಿಸಿ, ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 9:00 ಗಂಟೆಗೆ ಪೊಳಲಿ ರಾಮಕೃಷ್ಣ ತಪೋವನ ರಾಜರಾಜೇಶ್ವರೀ ಸಭಾಂಗಣದಲ್ಲಿ ತುರ್ತು ಸಭೆ ನಡೆಯಿತು. ಈ ಸಭೆಯಲ್ಲಿ ಮಂಗಳವಾರದಂದು ಪ್ರತಿಭಟನೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ಸ್ವಯಂ ಪ್ರೇರಿತವಾಗಿ ಅಂಗಡಿ ಮುಗಟ್ಟನ್ನು ಬಂದ್ ಮಾಡಿ, ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಸ್ಥಳೀಯರಲ್ಲಿ ವಿನಂತಿ ಮಾಡುವ ಮೂಲಕ ಪ್ರತಿಭಟನೆಯನ್ನು ನಡೆಸುವುದಾಗಿ ನಿರ್ಧರಿಸಲಾಯಿತು.

ಈ ವೇಳೆ ವೇದಿಕೆಯಲ್ಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ , ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾವುಡ, ಚಂದ್ರಹಾಸ್ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ನೂಯಿ ಬಾಲಕೃಷ್ಣ ರಾವ್, ಅಬೂಬಕ್ಕರ್ ಅಮ್ಮುಜೆ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಕಿಶೋರ್‌ ಪಲ್ಲಿಪಾಡಿ, ರಾಧ ಲೋಕೇಶ್ ಪಲ್ಲಿಪಾಡಿ, ಯಶವಂತ್ ಪೊಳಲಿ, ಚಂದ್ರಶೇಖರ್ ಶೆಟ್ಟಿ, ಸುಕೇಶ್ ಚೌಟ, ಶಶಿ ಕಿರಣ್ ಬಡಗಬೆಳ್ಳೂರು, ಮಮತಾ ಬಡಗಬೆಳ್ಳೂರು , ಸಂದೀಪ್ ತೆಂಕಬೆಳ್ಳೂರು, ಸತ್ಯಪ್ರಸಾದ್ ಶೆಟ್ಟಿ, ‌ ಉಮೇಶ್‌ ಆಚಾರ್ಯ, ಕಾರ್ತಿಕ್ ಬಲ್ಲಾಳ್ , ಬಸೀರ್‌ ಗಾಣೆಮಾರ್, ನವಾಜ್‌, ಉಸ್ಮಾನ್‌ , ವಿಜಯ ಪಲ್ಲಿಪಾಡಿ ಸೇರಿದಂತೆ ಕರಿಯoಗಳ, ಅಮ್ಮoಜೆ , ಅಡ್ಡೂರು, ತೆಂಕಬೆಳ್ಳೂರು, ಬಡಗಬೆಳ್ಳೂರು ಗ್ರಾಮಗಳ ಎಲ್ಲಾ ಸಂಘ ಸಂಸ್ಥೆಯವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter