ನಿವೃತ್ತ ಶಿಕ್ಷಕಿ, ಯಕ್ಷಗಾನ ಕಲಾವಿದೆ ರತ್ನಾ ಕೆ.ಭಟ್ ತಲಂಜೇರಿಗೆ ‘ ಶ್ರೀಶಾರದಾ ತಿಲಕ’ ಪ್ರಶಸ್ತಿ ಪ್ರಧಾನ
ಬಂಟ್ವಾಳ: ತಾಲೂಕಿನ ಇರ್ವತ್ತೂರುಪದವುಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ ಮೂಡುಪಡುಕೋಡಿ ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆಯಲ್ಲಿ ಬುಧವಾರ 8ನೇ ವರ್ಷದ ಶ್ರೀ ಶಾರದ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ,ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದೆ ರತ್ನಾ ಕೆ.ಭಟ್ ತಲಂಜೇರಿ ಅವರಿಗೆ ‘ ಶ್ರೀಶಾರದಾ ತಿಲಕ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನಾ ಕೆ.ಭಟ್ ಸಮಾನ ಮನಸ್ಕರೆಂಬುದು ಈ ಮಣ್ಣಿನ ಸತ್ವವಾಗಿದೆ.ಅಂತಹ ಸಮಾನ ಮನಸ್ಕರು ಒಗ್ಗೂಡಿಕೊಂಡು ಮಾಡುವಂತ ಯಾವುದೇ ಕಾರ್ಯ ಯಶಸ್ಸು ಕಾಣಲು ಸಾಧ್ಯ ಎಂದರು.
ಕಿರಿಯರ ಬಗ್ಗೆ ಹಿರಿಯರಲ್ಲಿ ಯಾವುದೇ ಕೀಳರಿಮೆ ಬೇಡ, ಊರಿನ ಅಭಿವೃದ್ಧಿಯಲ್ಲಿ ಕಿರಿಯರನ್ನು ಕೂಡ ಹಿರಿಯರು ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸಬೇಕು ಎಂದ ಅವರು ಮಕ್ಕಳ ಮನಸ್ಸು ದೇವರ ಮನಸ್ಸು ಇದ್ದಂತೆ, ಅಂತಹ ಮಕ್ಕಳ ಕೈಗೆ ಮೊಬೈಲ್ ನೀಡದೆ ಸಂಸ್ಕಾರ ಕೊಡುವ ಕೆಲಸ ತಾಯಂದಿರಿಂದ ಆಗಬೇಕಾಗಿದೆ ಎಂದು ಹೇಳಿದರು.
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ಡಾ| ಎಂ. ಹರ್ಷ ಸಂಪಿಗೆತ್ತಾಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಶಾರದ ಸೇವಾ ಸಮಿತಿ ನಡೆಸುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇದೇ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ದಿವ್ಯಾ ಹಾಗೂ ಅನನ್ಯ ಅವರನ್ನು ಅಭಿನಂದಿ ಸಲಾಯಿತು. ಕು.ಪೂಜಾ,ಕು.ದೀಪ್ತಿ,ಕು.ಶ್ರಮಾ, ಕು.ಸುಶ್ಮಿತಾ,ಕು.ಅನರ್ಘ್ಯ ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ಅಂಬ್ಯುಲೆನ್ಸ್ ಚಾಲಕ ಚಂದ್ರಹಾಸ ಎರ್ಮೆನಾಡು,ದಯಾನಂದ ಎರ್ಮೆನಾಡು,ಸುಪ್ರೀತ್ ಜೈನ್ ಅವರನ್ನು ಸನ್ಮಾನಿಸಲಾಯಿತು.
ಕಾವಳಪಡೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪಿ. ಅಮ್ಮು ರೈ ಹರ್ಕಾಡಿ,ದ.ಕ.
ವರ್ತಕರ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ,ರಾಯಿ ಶ್ರೀ ಗಣೇಶೋತ್ಸವ ಸಮಿತಿಗೌರವಾಧ್ಯಕ್ಷರಾದರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ,ಕುತ್ತಿಲ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಗಿರೀಶ್ ಪೂಜಾರಿ ಹೆಗ್ಗಡೆಬೆಟ್ಟು ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಶಾರದೋತ್ಸವ ಸೇವಾ ಸಮಿತಿ ಕಾರ್ಯಾಧ್ಯಕ್ಷ ಹರೀಂದ್ರ ಪೈ,ಉಪಾಧ್ಯಕ್ಷ ಶೇಖರ ಪೂಜಾರಿ ಅಗಲ್ದೋಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಕಯ್ಯಾಬೆ, ಸಿವಿಲ್ ಗುತ್ತಿಗೆದಾರಮೋಹನ್ ಶೆಟ್ಟಿ ನರ್ವಲ್ದಡ್ಡ,,ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ,ಶಿಕ್ಷಕಿ ಸುಜಾತ ಆರ್ .ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಶಾರದೋತ್ಸವ ಸೇವಾ ಸಮಿತಿಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಪ್ರಸ್ತಾವನೆಗೈದು ಮುಂದಿನ ದಿನಗಳಲ್ಲಿ ಮೈದಾನದಲ್ಲಿ ಬಯಲುರಂಗಮಂದಿರ ನಿರ್ಮಾಣಕ್ಕೆ ಯೋಚಿಸಲಾಗಿದೆ ಎಂದರು.
ಗೌರವಾಧ್ಯಕ್ಷ ರಾಜೀವ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿದಯಾನಂದ ಎಸ್ .ಎರ್ಮೆನಾಡು ಕಾರ್ಯಕ್ರಮ ನಿರೂಪಿಸಿದರು.ಸದಸ್ಯ ಸತೀಶ್ ಕರ್ಕೇರ ವಂದಿಸಿದರು.
ಶ್ರೀಶಾರದ ಪ್ರತಿಷ್ಠೆ:
ಬೆಳಿಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆಯ ಬಳಿಕ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನದ ಬಳಿಕಶಾಲಾಮಕ್ಕಳಿಂದನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಮಹಾಪೂಜೆಯ ನಡೆದು
ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯಿತು.ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಸ್ತಬ್ದಚಿತ್ರ ಮೆರವಣಿಗೆಗೆ ವಿಶೇಷ ಮೆರಗುನೀಡಿತು.