Published On: Fri, Oct 11th, 2024

ಮಗುವಿನ ವ್ಯಕ್ತಿತ್ವ ಅರಳಿಸುವ ಕೆಲಸ ತಾಯಿಯಿಂದಾಗಬೇಕು: ಟಿ.ಜಿ.ರಾಜಾರಾಮಭಟ್

ಬಂಟ್ವಾಳ: ಮಗುವಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸವನ್ನು ತಾಯಿ ಮಾಡಿದರೆ ಮಗುವಿನ ಮನದಲ್ಲಿ ಧಾರ್ಮಿಕ ಭಾವ ಉದ್ದೀಪನವಾಗುತ್ತದೆ ಆ ಮೂಲಕ ಹಿಂದೂ ಸಮಾಜ ಉತ್ಕರ್ಷವಾಗುತ್ತದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜರಾಂ ಭಟ್ ಹೇಳಿದರು.


ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಆಶ್ರಯದಲ್ಲಿ ಬುಧವಾರ ತುಂಬೆ ಶ್ರೀಶಾರದ ಮಂಟಪದಲ್ಲಿ ನಡೆದ 24ನೇ ವರ್ಷದ ತುಂಬೆ ಶ್ರೀ ಶಾರದಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು
ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸ ತಾಯಿಯಂದಿರಿಂದ ಆಗಬೇಕಾಗಿದ್ದು ಸಂಸ್ಕಾರದ ಪಾಠ ಮಾಡುವ ಪ್ರಯತ್ನ ಸಾಕಾರವಾದರೆ ಇಂತಹ ಕಾರ್ಯಕ್ರಮಗಳು  ಅರ್ಥಪೂರ್ಣವಾಗುತ್ತದೆ ಎಂದರು.


ನ್ಯಾಯವಾದಿ ಆಶಾಮಣಿ ಡಿ. ರೈ ಮಾತನಾಡಿ ಶಾರದೆ ಜ್ಞಾನ ಮಾತೆ, ಶಾರದೆಯನ್ನು ಆರಾಧಿಸಿದರೆ ಲಕ್ಷ್ಮಿ ಒಲಿಯುತ್ತಾಳೆ.  ಹಣದ ಆಸೆಗೆ ಪ್ರಕೃತಿಯನ್ನು ಹಾಳು ಮಾಡುವುದು ಸರಿಯಲ್ಲ, ನಾವು ಸಂಸ್ಕಾರವಂತರಾಗಿ ಇನ್ನೊಬ್ಬರಿಗೆ ತಿಳಿಸಿಕೊಡಬೇಕು. ಉಪದೇಶಕ್ಕಿಂತ ಅನುಸರಿಸಿ ತೋರುವುದೇ ಶ್ರೇಷ್ಠ ಎಂದು ತಿಳಿಸಿದರು.
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿದ್ದರು.


ಮುಂಬೈಯ ಉದ್ಯಮಿ ಮುರಳೀಧರ,ವಾಣಿಜ್ಯ ತೆರಿಗೆ ಅಧಿಕಾರಿ ನವೀನ್ ಚಂದ್ರ ಕೆ. ,ಬಂಟ್ವಾಳ ವಲಯ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ,ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ತುಂಬೆ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶಕುಂತಳ ಎಸ್. ಉಳ್ಳಾಲ ಅತಿಥಿಗಳಾಗಿ ಭಾಗವಹಿಸಿದ್ದರು. ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ  ಗಣೇಶ್ ಸುವರ್ಣ ತುಂಬೆ, ಉಪಾಧ್ಯಕ್ಷೆ
ಶೋಭಾ ಗೋಪಾಲ ಮೈಂದನ್, ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್,  ಶಾರದೋತ್ಸವ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಶ್ರೀ ಶೈಲ ವೇದಿಕೆಯಲ್ಲಿದ್ದರು.‌ಮಾಜಿ ಜಿ.ಪಂ. ಸದಸ್ಯರವೀಂದ್ರ ಕಂಬಳಿ, ಪ್ರಮುಖರಾದ  ನವೀನ್ ಪಾದಲ್ಪಾಡಿ, ಎಂ.ಆರ್. ನಾಯರ್, ತಾರನಾಥ ಕೊಟ್ಟಾರಿ ತೇವು, ಕೃಷ್ಣ ಕುಮಾರ್ ಪೂಂಜ  ಮೊದಲಾದವರಿದ್ದರು.ಈ‌ ಸಂದರ್ಭ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ. ತುಂಬೆ ಸ್ವಾಗತಿಸಿದರು, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು. ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ  ರಮಾನಂದ‌ ಅಮೀನ್ ತುಂಬೆ ವಂದಿಸಿದರು.
ಶ್ರೀಶಾರದ ಪ್ರತಿಷ್ಠೆ:ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ,ಶ್ರೀರಾಮ ನಗರ, ತುಂಬೆ ಇದರ ಆಶ್ರಯದಲ್ಲಿ” 24 ನೇ ವರ್ಷದ “ತುಂಬೆ ಶ್ರೀ ಶಾರದಾ ಮಹೋತ್ಸವ” ದ ಪ್ರಯುಕ್ತ ಬುಧವಾರ ಬೆಳಿಗ್ಗೆ ತುಂಬೆ  ಶ್ರೀಶಾರದ ಮಂಟಪದಲ್ಲಿ  ಶ್ರೀ ಶಾರದಾಂಬೆಯ ಪ್ರತಿಷ್ಠೆಯು ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಧ್ವಜಾರೋಹಣ ನಡೆದು ನಿರಂತರ ಭಜನೆ,ಅಕ್ಷರ ಲೇಖನಾರಂಭ,ವಿವಿಧ ಸ್ಪರ್ಧೆ,ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆಯು ನಡೆಯಿತು.
ಮಧ್ಯಾಹ್ನದ ಬಳಿಕ ಸಾಂಸ್ಕೃತಿಕ ವೈವಿಧ್ಯತೆ,ಕುಣಿತ ಭಜನೆ,ವಿಸರ್ಜನಾಪೂಜೆ ನಡೆದು ಶ್ರೀಶಾರದಾ ಮಾತೆಯವೈಭವಪೂರ್ಣ ಶೋಭಾಯಾತ್ರೆಯು ಉತ್ಸವ ಮಂಟಪದಿಂದ ಹೊರಟು,ರಾಮಲ್ ಕಟ್ಟೆಯಿಂದ ಕೆಳಗಿನ ತುಂಬೆಯಿಂದ ನೇತ್ರಾವತಿ ರಸ್ತೆಯಲ್ಲಿ ಸಾಗಿ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter