ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಅಸ್ವಸ್ತಗೊಂಡ ವ್ಯಕ್ತಿ, ಬಜ್ಪೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಪೊಳಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಇಂದು ನವರಾತ್ರಿಯ ಪ್ರಯುಕ್ತ ಜನಸಾಗರ ಬರುತ್ತಿದೆ. ಈ ವೇಳೆ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ದೇವಾಲಯಕ್ಕೆ ಬಂದ ಭಕ್ತರೊಬ್ಬರು ಅಸ್ವಸ್ತಗೊಂಡಿದ್ದಾರೆ. ಇದೀಗ ಅವರನ್ನು ಬಜ್ಪೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. ಈ ವ್ಯಕ್ತಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಆದರೆ ಇವರು ಬಿಸಿ ರೋಡಿನಿಂದ ಬಂದಿದ್ದಾರೆ ಎಂದು ಹೇಳಲಾಗಿದೆ.
ಇಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸುಮಾರು 60ವರ್ಷ ಪ್ರಾಯದ ವ್ಯಕ್ತಿ ಬಂದಿದ್ದಾರೆ. ತೀವ್ರ ಅಸ್ವಸ್ತ ಗೊಂಡಿದ್ದಾರೆ, ಈ ವೇಳೆ ದೇವಾಲಯದ ಸಿಬ್ಬಂದಿಗಳು ಅವರನ್ನು ಕೂಡಲೇ ಬಜ್ಪೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸಿದ್ದಾರೆ ಸಾದರಣ ಮೈಕಟ್ಟಿನ ವ್ಯಕ್ತಿ ನೀಲಿ ಶರ್ಟ್, ಕುತ್ತಿಗೆಯಲ್ಲಿ ಸ್ಪಟಿಕ ಮಾಲೆ ಧರಿಸಿದ್ದಾರೆ. ಅವರ ಬಗ್ಗೆ ಬಗ್ಗೆ ಮಾಹಿತಿ ಪಡೆಯಲು ದೇವಾಲಯದಿಂದ ಅಥವಾ ಬಜ್ಪೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಬರುವಂತೆ ದೇಗುಲ ಸಿಬ್ಬಂದಿಗಳು ಹೇಳಿದ್ದಾರೆ.