ಮೂಡುಬಿದಿರೆ: ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿದ ಚಾಲಕ, ಖಾಸಗಿ ಬಸ್ಸಿನ ವಿರುದ್ಧ ದೂರು ದಾಖಲು
ಮಂಗಳೂರಿನಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದರ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಲಾಯಿಸಿದ ಚಾಲಕನ ವಿರುದ್ಧ ಪ್ರಕರಣವು ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ ಅವರು, ಬಸ್ಸನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು – ಮೂಡಬಿದ್ರೆ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ KA 19 AB 1339 ಸಂಖ್ಯೆಯ ಜೈನ್ ಹೆಸರಿನ ಖಾಸಗಿ ಬಸ್ಸಿನ ನಿರ್ಲಕ್ಷ್ಯ ರೀತಿಯಲ್ಲಿ ಚಾಲಯಿಸಿ ಮತ್ತೊಂದು ಖಾಸಗಿ ಬಸ್ಸನ್ನು ಓವರ್ ಟೇಕ್ ಮಾಡಿದ್ದನು. ಈ ಚಾಲಕನ ಪ್ರಯಾಣಿಕರಿಗೆ ಮಾತ್ರವಲ್ಲ ರಸ್ತೆಯಲ್ಲಿ ಹೋಗುತ್ತಿದ್ದವರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಮೂಡುಬಿದಿರೆ ಸಮೀಪದ ತೋಡಾರು ಎನಪೋಯ ಮೆಡಿಕಲ್ ಕಾಲೇಜು ಬಳಿಯ ಏಕರೂಪದ ರಸ್ತೆಯಲ್ಲಿ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡುವ ಆತುರದಲ್ಲಿ ಎದುರುಗಡೆ ಬರುತ್ತಿದ್ದ ವಾಹನಗಳನ್ನು ಲೆಕ್ಕಿಸದೆ ಬಸ್ಸು ಚಾಲಕ ವಾಹನ ಚಲಾಯಿಸಿದ್ದಾನೆ. ಈ ಘಟನೆಗೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದ್ದು, ಖಾಸಗಿ ಬಸ್ಸಿನ ಚಾಲಕನಾದ ಮೂಡುಬಿದಿರೆ ತೋಡಾರು ನಿವಾಸಿ ಮಹಮ್ಮದ್ ಇಸ್ಮಾಯಿಲ್ (32) ವಿರುದ್ಧ ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಸ್ಸು ಚಾಲಕನ ಡ್ರೈವಿಂಗ್ ಲೆಸನ್ಸ್ ಅನ್ನು ರದ್ದುಪಡಿಸಬೇಕೆಂದು ಕೋರಿ ಮಂಗಳೂರು ಆರ್ ಟಿ ಓ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.