ಬಜಿರೆ ಬಸದಿ ಭಗವಾನ್ ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ
ಮೂಡಬಿದಿರೆ:ವೇಣೂರಿನ ಬಜಿರೆ ಹಲ್ಲಂದೋಡಿ ಬಸದಿ ಭಗವಾನ್ 1008 ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ, ಅಷ್ಟಾವಧಾನ ಪೂಜೆ,
ಮೂಡುಬಿದಿರೆ ಶ್ರೀ ಜೈನ ಮಠದ “ಭಾರತಭೂಷಣ” ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ,ಆಶೀರ್ವಚನಗಳೊಂದಿಗೆ ನಡೆಯಿತು.

108 ಕಲಶ ಅಭಿಷೇಕ,ಮಧ್ಯಾಹ್ನದ ನಂತರ ಕಲಿಕುಂಡ ಯಂತ್ರಾರಾಧನೆ,ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಲಕ್ಷ ಹೂವಿನ ಪೂಜೆ, ಶ್ರೀ ಸರ್ವಾಹ್ಮಯಕ್ಷ ದೇವರ ಉತ್ಸವ, ಅಷ್ಟಾವಧಾನ ಪೂಜೆ, ಮಹೋತ್ಸವ, ಮಹಾಪೂಜೆ ಮುಂತಾದ ಧರ್ಮಕಾರ್ಯಗಳು ಪುರೋಹಿತ ಶಶಿಕುಮಾರ್ ಇಂದ್ರರ ನೇತೃತ್ವದಲ್ಲಿ, ಮೂಡಬಿದ್ರೆ ಸುವಿಧಿ ಇಂದ್ರ, ಹರ್ಷಕುಮಾರ್ ಇಂದ್ರರವರ ತಂಡದಿಂದ ನೆರವೇರಿತು.ಶ್ರೀ ದೇವರ ನರ್ತನಾ ಸೇವೆ ಸಂದೇಶ ಇಂದ್ರರೂ ಸಂಗೀತ ಅಷ್ಟವಿಧಾರ್ಚನೆ ಪೂಜೆಯನ್ನು ಧರಣೇಂದ್ರ ಇಂದ್ರರೂ ನಡೆಸಿಕೊಟ್ಟರು.
ಅಷ್ಟಾವಧಾನದಲ್ಲಿ ವಿದೂಷಿ ಕುಮಾರಿ ಶ್ರವಣರವರಿಂದ ನೃತ್ಯ ಸೇವೆ, ಪರುಷ ಶ್ರೀ ಭಜನಾ ತಂಡದವರಿಂದ ಸಂಗೀತ ಸೇವೆ ಸಂವಸರಣದ ಮುಂಭಾಗದ ವೇದಿಕೆಯಲ್ಲಿ ಸುಂದರವಾಗಿ ಮೂಡಿಬಂದಿತು.ಊರ ಹಾಗೂ ಪರವೂರ ಭಕ್ತಾದಿಗಳು ಮಹೋತ್ಸವದಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸಿ ದೇವರಪ್ರಸಾದ ಸ್ವೀಕರಿಸಿದರು.