ಮೂಡುಬಿದಿರೆ: ಅ.6ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆ, ಅಮೃತ ಸಭಾಭವನದ ಉದ್ಘಾಟನೆ

ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ), ಶ್ರೀನಾರಾಯಣ ಗುರು ಸೇವಾದಳ ಹಾಗೂ ಶ್ರೀ ನಾರಾಯಣ ಗುರು ಮಹಿಳಾ ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜನ್ಮದಿನಾಚರಣೆ ಮತ್ತು ಮೂರ್ತಿ ಪ್ರತಿಷ್ಟಾಪನೆಯ 38 ನೇ ವಾರ್ಷಿಕೋತ್ಸವದ ಸಮಾರಂಭ, ಗುರುಪೂಜೆ ಹಾಗೂ ಹವಾನಿಯಂತ್ರಿತ ಅಮೃತ ಸಭಾಭವನದ ಉದ್ಘಾಟನೆ ಸಮಾರಂಭವು ಅಕ್ಟೋಬರ್ 6 ರಂದು ಕಾಮಧೇನು ಸಭಾಭವನದಲ್ಲಿ ನಡೆಯಲಿದೆ.
ಅಕ್ಟೋಬರ್ 5 ಶನಿವಾರದಂದು ಸಂಜೆ 5 ರಿಂದ ಸಪ್ತಶುದ್ಧಿ, ಸ್ವಸ್ತಿಪುಣ್ಯಾಹವಾಚನ ವಾಸ್ತುಹೋಮ, ಸುದರ್ಶನ ಹೋಮ. ರಾಕೋಘ್ನ ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ ಹಾಗೂ ಅಕ್ಟೋಬರ್ 6 ರಂದು ಗುರುಸ್ತುತಿ, ಗಣಹೋಮ, ಪಂಚಾಮೃತ ಅಭಿಷೇಕ 10:00ಕ್ಕೆ ನೂತನ ಅಮೃತ ಸಭಾಭವನದ ಉದ್ಘಾಟನೆ ಸಭಾ ಕಾರ್ಯಕ್ರಮ ನೆರವೇರಲಿದೆ.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಇರಲಿದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಥ ಎ ಕೋಟ್ಯಾನ್ ಮತ್ತಿತ್ತರ ಗಣ್ಯರು ಭಾಗವಹಿಸಲಿದ್ದಾರೆ.