“ಶಾಂತ ಶ್ರೀ” ಪ್ರಶಸ್ತಿಗೆ ಶಿಲ್ಪಾ ಗೊಂಬೆ ಬಳಗ ರೂವಾರಿ ಕೆ ರಮೇಶ್ ಕಲ್ಲಡ್ಕ ಆಯ್ಕೆ
ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಇದರ ಆಶ್ರಯದಲ್ಲಿ ನಡೆಯು 47 ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವದ ಸಂದರ್ಭದಲ್ಲಿ ದಿವಂಗತ ಶಾಂತರಾಮ ಆಚಾರ್ಯ ಕಲ್ಲಡ್ಕ ಇವರ ಸವಿ ನೆನಪಿಗಾಗಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವರ್ಷಂ ಪ್ರತಿ ನೀಡುವ “ಶಾಂತ ಶ್ರೀ ” ಪ್ರಶಸ್ತಿಗೆ ಜಾನಪದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ”ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ರೂವಾರಿ ಕೆ ರಮೇಶ್ ಕಲ್ಲಡ್ಕ ಅವರನ್ನು ಆಯ್ಕೆಯಾಗಿದ್ದಾರೆ.

ಅ. 11ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಶಾರದಾ ಪೂಜಾಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಗೈದು ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.