ಬಂಟ್ವಾಳ: ಪಾಣೆಮಂಗಳೂರು ಶಾರದಾ ಪೂಜಾ ಮಹೋತ್ಸವದಲ್ಲಿ ಅಂಚೆ ಲಕೋಟೆ ಬಿಡುಗಡೆ

ಬಂಟ್ವಾಳ: ಪಾಣೆಮಂಗಳೂರಿನ ಈ ಬಾರಿ ದಸರಾ ತುಂಬಾ ವಿಶೇಷವಾಗಿತ್ತು. ಈ ಬಾರಿಯ ಪಾಣೆಮಂಗಳೂರು ಶಾರದಾ ಪೂಜಾ ಮಹೋತ್ಸವದಲ್ಲಿ ಶತಮಾನೋತ್ಸವ ಆಚರಣೆಯ ಅಂಗವಾಗಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಅ.8ರಂದು ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು.
ಪಾಣೆಮಂಗಳೂರು ಅಂಚೆ ಕಛೇರಿಯಲ್ಲಿ ಅಂಚೆ ಲಕೋಟೆಯನ್ನು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಜಿ.ಹರೀಶ್ ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದ ನಂತರ ಪಾಣೆಮಂಗಳೂರು ಶ್ರೀ ವಿಠಲಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವರೆಗೆ ಮೆರವಣಿಗೆ ಮಾಡಲಾಗಿತ್ತು ನಂತರ ಅದನ್ನು ಬಿಡುಗಡೆ ಮಾಡಲಾಗಿದೆ. ನಂತರ ಇದನ್ನು ಶಾರದಾ ಪೂಜಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೂನಿಷ್ ಅಲಿ ಹಾಗೂ ಸದಸ್ಯರಾದ ಇದ್ರೀಸ್ ,ಪುತ್ತೂರು ಸಹಾಯಕ ಅಂಚೆ ಅಧೀಕ್ಷಕರಾದ ಚಂದ್ರ ನಾಯ್ಕ , ಕಾರ್ಕಳ ಸಹಾಯಕ ಅಂಚೆ ಅಧೀಕ್ಷಕರಾದ ಮೋಹನ್ , ಪಾಣೆಮಂಗಳೂರು ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಯೋಗೀಶ್ ಪೈ , ಅಧ್ಯಕ್ಷರಾದ ಪ್ರಮೋದ್ ಭಟ್, ಕಾರ್ಯದರ್ಶಿ ಗಣೇಶ್ ನಾಯಕ್, ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಪ್ರಹ್ಲಾದ್ ನಾಯಕ್ ಎನ್, ಪಾಣೆಮಂಗಳೂರು ಉಪ ಅಂಚೆಪಾಲಕರಾದ ಗೀತಾ ಉಪಸ್ಥಿತರಿದರು.