ಸಾಮಾಜಿಕ ಕಾಳಜಿ ಶ್ರದ್ಧಾಕೇಂದ್ರದ ಆಶಯವಾಗಬೇಕು: ಸೀತಾರಾಮ ಎ.
ಬಂಟ್ವಾಳ: ಧಾರ್ಮಿಕ ಆಚರಣೆ ಮೂಲ ಉದ್ದೇಶವಾದರೂ ಸಾಮಾಜಿಕ ಕಾಳಜಿ ಶ್ರದ್ಧಾಕೇಂದ್ರದ ಆಶಯವಾಗಬೇಕು. ಅನ್ನದಾನ, ವಿದ್ಯಾದಾನಾದಿ ಸಮಾಜಮುಖಿ ಕೆಲಸಗಳು ಪ್ರಸಾದರೂಪವಾಗಿ ಫಲಾನುಭವಿಯ ಬಳಿ ಸೇರಬೇಕು ಎಂದು ಮಂಗಳೂರು ಅರಕೆರೆಬೈಲು ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರದ ಅಧ್ಯಕ್ಷರಾದ ಸೀತಾರಾಮ ಎ. ಅಭಿಪ್ರಾಯ ಪಟ್ಟರು.

ಬ್ರಹ್ಮರಕೊಟ್ಲು ಸಮೀಪದ ಜ್ಯೋತಿಗುಡ್ಡೆಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತಾಡಿದರು.
ಇನ್ನೋರ್ವ ಅತಿಥಿನಿವೃತ್ತ ಎ.ಆರ್.ಟಿ.ಒ ವಿಶ್ವನಾಥ ನಾಯ್ಕ ಇವರು ಮಾತನಾಡಿ ದೇವಾಲಯದ ಹಬ್ಬದ ಸಡಗರದ ವೇದಿಕೆಯಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸ್ತುತ್ಯಾರ್ಹವಾಗಿದೆ ಎಂದರು.
ಬಂಟ್ವಾಳ ಗುತ್ತಿಗೆದಾರರ ಸಂಘ ಅಧ್ಯಕ್ಷಶೈಲೇಶ್ ಪೂಜಾರಿ, ಕುಚ್ಚಿಗುಡ್ಡೆ,ತುಂಬೆ ರಾಮಲ್ ಕಟ್ಟೆಎಳೆಯರ ಬಳಗ ದ ಅಧ್ಯಕ್ಷಪೂಜೇಶ್ ಆಚಾರ್ಯ,ಜ್ಯೋತಿಷ್ಯ ಅನಿಲ್ ಪಂಡಿತ್ ಕೃಷ್ಣಾರಾಧ್ಯಂ ಅವರು ವೇದಿಕೆಯಲ್ಲಿದ್ದರು.
2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಸ್ಥಳೀಯ ಸರಕಾರಿ ಶಾಲೆಗಳವಿದ್ಯಾರ್ಥಿಗಳಾದ – ಕು ವೈಷ್ಣವಿ, ಕು ಲಹರಿ ಎಸ್, ದೇವಿಕಾ ಆರ್.,ಕು ಕಾವ್ಯ, ಕು ಸುಶಾನ್, ಕು ಮುಹಮ್ಮದ್ ಮುಬಶಿರ್, ಕು ಶಿಫಾನ, ಕು. ಕುಶಿ, ಹಾಗೂ ಎಂ.ಎ ಹಿಂದಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಕು ರಶ್ಮಿತಾ ಪೆರಿಯೋಡಿ ಅವರನ್ನು ಅಭಿನಂದಿಸಲಾಯಿತು.
ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಸಂಚಾಲಕ ನಾರಾಯಣ ನಾಯ್ಕ್ ಪೆರ್ನೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟಿಟಿ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು.
ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಅಧ್ಯಕ್ಷರಾದ ಉಮೇಶ್ ಕುಮಾರ್ ರೆಂಜೋಡಿ ಸ್ವಾಗತಿಸಿದರು. ಮಲ್ಲಿಕಾ ಎಂ ಜ್ಯೋತಿಗುಡ್ಡೆ ಇವರು ಪ್ರಾರ್ಥಿಸಿ, ಸುಜಾತ ನವೀನ್ ಗುಂಡಿಬೆಟ್ಟು ಹಾಗೂ ರೇಶ್ಮಾ ಯಶವಂತ್ ಮುಂಡಾಜೆ ಸನ್ಮಾನ ಪತ್ರವಾಚಿಸಿದರು. ವೇಣುಗೋಪಾಲ್ ಜ್ಯೋತಿಗುಡ್ಡೆ ವಂದಿಸಿದರು, ಉದಯ ಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ ಹಾಗೂ ಯಕ್ಷಗಾನ ತಾಳಮದ್ದಳೆಯು ನಡೆಯಿತು.