ಪೊಳಲಿ: ರಾಜರಾಜೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ, ಲೈವ್ ನೋಡಲು ಸುದ್ದಿ9 ಯೂಟ್ಯೂಬ್ ಚಾಲನ್ಗೆ ಭೇಟಿ ನೀಡಿ
ಪೊಳಲಿ: ನವರಾತ್ರಿ ಉತ್ಸವಕ್ಕೆ ಸಾಕ್ಷಿಯಾಗಲಿದೆ ಪೊಳಲಿ ರಾಜರಾಜೇಶ್ವರಿ ಕ್ಷೇತ್ರ. ಇಂದಿನಿಂದ ಅಂದರೆ ಅ.3ರಿಂದ ಅ.11ರವರೆಗೆ ಕ್ಷೇತ್ರದಲ್ಲಿ ಭಾರೀ ಅದ್ಧೂರಿಯಾಗಿ ನವರಾತ್ರಿ ಉತ್ಸವ ನಡೆಯಲಿದೆ. ಈ ವೇಳೆ ತಾಯಿಗೆ ವಿಶೇಷ ಪೂಜೆಗಳು ನಡೆಯಲಿದೆ. ಇದರ ಜತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿಯೊಂದು ಕಾರ್ಯಕ್ರಮದ ಕ್ಷಣ ಕ್ಷಣ ಅಪ್ಡೇಟ್ನ್ನು ಸುದ್ದಿ9ನಲ್ಲಿ ಲೈವ್ ನೋಡಬಹುದು.
ಈಗಾಗಲೇ ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಿದೆ. ದೇವಿಗೆ ವಿಶೇಷ ಹೋಮ ಹವನಗಳು ಕೂಡ ನಡೆದಿದೆ. ಪೊಳಲಿ ಕ್ಷೇತ್ರದ ಆಡಳಿತ ಮಂಡಲಿ ಈ ಕಾರ್ಯಕ್ರಮದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇಂದು (ಅ.3) ಸಂಜೆ 5ಗಂಟೆಗೆ ಯಕ್ಷಗಾನ ಸ್ವರಭಿಷೇಕ “ಶ್ರೀ ರಾಮಕಥಾ ಗಾನ ಸುಧಾ” (ತೆಂಕು ಮತ್ತು ಬಡಗು) ನಡೆಯಲಿದೆ. ಹಾಗೂ ಕುಸಲ್ದ ಗುರಿಕಾರೆ ದಿನೇಶ್ ಕೊಡಪದವು ಸಾರಥ್ಯದಲ್ಲಿ “ಯಕ್ಷ ತೆಲಿಕೆ” ಕೂಡ ನಡೆಯಲಿದೆ. ಈ ಕಾರ್ಯಕ್ರಮವನ್ನು ನೋಡಲು ಸುದ್ದಿ9 ಯೂಟ್ಯೂಬ್ ಚಾಲನ್ಗೆ ಭೇಟಿ ನೀಡಿ