ಸರಕಾರಿ ಪ್ರೌಢಶಾಲೆ ಪೊಳಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಇದೇ ವೇಳೆಯಲ್ಲಿ ಗಾಂಧೀಜಿಯವರ ಅಹಿಂಸೆ ಸತ್ಯಾಗ್ರಹ ಚಳವಳಿ ಮುಂತಾದ ತತ್ವಗಳನ್ನು ಜೀವನದುದ್ದಕ್ಕೂ ಪರಿಪಾಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ವಿದ್ಯಾರ್ಥಿಗಳು ಸ್ವಚ್ಛತಾ ಹೀ ಸೇವಾ ಘೋಷವಾಕ್ಯದಡಿಯಲ್ಲಿ ಅರ್ಥಪೂರ್ಣವಾಗಿ ಬಸ್ಸು ನಿಲ್ದಾಣ ಮತ್ತು ದೇವಸ್ಥಾನದ ಪರಿಸರದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ನೇತಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ದೈಹಿಕ ಶಿಕ್ಷಕರಾದ ಜಯಂತ ಆಚಾರ್ಯ ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶ್ರೀ ಮುರಳಿದರ ಆಚಾರ್ಯ ನೇತಾರರ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಈ ವೇಳೆಯಲ್ಲಿ ಸ್ಮರಿಸಿದರು. 9ನೇ ತರಗತಿ ವಿದ್ಯಾರ್ಥಿನಿ ಕ್ಷಮ ಆಚಾರ್ಯ ತನ್ನ ಅನಿಸಿಕೆಯನ್ನು ತಿಳಿಸಿದರು. ಅತಿಥಿ ಅಭ್ಯಂಗತರನ್ನು ಮುಖ್ಯ ಶಿಕ್ಷಕರಾದ ಸುಬ್ರಾಯಪೈ ಸ್ವಾಗತಿಸಿ, ಶ್ರೀಮತಿ ವಸಂತಿ ಕಾರ್ಯಕ್ರಮ ನಿರೂಪಿಸಿ , ಶ್ರೀಮತಿ ಉಮಾ ಧನ್ಯವಾದ ಸಮರ್ಪಿಸಿದರು.

By Suddi9

Leave a Reply

Your email address will not be published. Required fields are marked *