ಅಡ್ಡೂರು- ಪೊಳಲಿ ಪಲ್ಗುಣಿ ಸೇತುವೆ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಳ್ಳದ ಜಿಲ್ಲಾಡಳಿತಕ್ಕೆ ಮನವಿ, ಪ್ರತಿಭಟನೆಗೆ ಮುಂದಾದ ಸ್ಥಳೀಯರು

ಪೊಳಲಿ: ಅಡ್ಡೂರು-ಪೊಳಲಿ ಪಲ್ಗುಣಿ ಸೇತುವೆ ಬಗ್ಗೆ ಇನ್ನು ತಿರ್ಮಾನ ತೆಗೆದುಕೊಳ್ಳದ ಜಿಲ್ಲಾಡಳಿತ, ಎರಡು ತಿಂಗಳು ಕಳೆದರು. ಇನ್ನು ಈ ಬಗ್ಗೆ ಯೋಚನೆ ಮಾಡುತ್ತಿಲ್ಲ ಇಲ್ಲಿನ ಅಧಿಕಾರಿಗಳು, ಸೇತುವೆ ಸಾಮರ್ಥ್ಯ ಧಾರಣಾ ಯಂತ್ರ ಬಂದು ಎಲ್ಲ ಪರಿಶೀಲನೆ ಮಾಡಿ. ಪರಿಶೀಲನೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ನೀಡಿ. ಅದರ ಮಾದರಿಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದೆ. ಆ ಬಗ್ಗೆನೂ ಏನು ಮಾಹಿತಿ ಇಲ್ಲ. ಇತ್ತ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಮಾಡುತ್ತೇವೆ ಎಂಬ ಮಾತಿಗೂ ಜಿಲ್ಲಾಡಳಿತ ಬದ್ಧವಾಗಿಲ್ಲ. ಒಟ್ಟಾರೆ ಜನರ ಕಷ್ಟ ನಷ್ಟ ಈ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಇದೀಗ ಕೊನೆ ಮಾರ್ಗ ಅದು ಪ್ರತಿಭಟನೆ, ಈ ಹಿಂದೆ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಅದರೂ ಅದಕ್ಕೂ ಈ ಅಧಿಕಾರಿಗಳು, ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿಲ್ಲ.
ಮಂಗಳೂರು-ಬಂಟ್ವಾಳ ತಾಲೂಕಿನ ಗುರುಪುರ ,ಅಡ್ಡೂರು-ಪೊಳಲಿ ,ಕರಿಯಂಗಳ, ಅಮ್ಮುಂಜೆ ಬಡಗಬೆಳ್ಳೂರು, ತೆಂಕಬೆಳ್ಳೂರು, ಗ್ರಾಮದ ಜನರು ಈ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಒಂದು ಪರ್ಯಾಯ ವ್ಯವಸ್ಥೆ ಮಾಡಿ, ಇಲ್ಲವೆಂದರೆ ನಮ್ಮ ಪ್ರತಿಭಟನೆ ಕಿಚ್ಚು ಎದುರಿಸಿ ಎಂದು ಹೇಳಿದ್ದಾರೆ. ಈಗಾಗಲೇ ಇದಕ್ಕೂಂದು ಪರ್ಯಾಯ ವ್ಯವಸ್ಥೆ ಮಾಡಿ ಎಂದು ಗ್ರಾಮ ಪಂಚಾಯತ್ನಿಂದ ಹಿಡಿದು, ತಾಲೂಕು, ಜಿಲ್ಲಾಡಳಿತ, ಇಬ್ಬರು ಶಾಸಕರಾದ ರಾಜೇಶ್ ನಾಯ್ಕ್, ಭರತ್ ಶೆಟ್ಟಿ, ಸಂಸದ ಬ್ರಿಜೇಶ್ ಚೌಟ, ಜಿಲ್ಲಾ ಉಸ್ತುವರಿ ಸಚಿವ ದಿನೇಶ್ ಗುಂಡೂರಾವ್, ಪೊಲೀಸ್ ಆಯುಕ್ತರಿಗೂ, ಲೋಕೋಪಯೋಗಿ ಇಲಾಖೆಗೂ ಮನವಿಯನ್ನು ಮಾಡಲಾಗಿದೆ.

ಅದರೂ ಇದಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಇದೀಗ ಇದರಿಂದ ರೋಸಿ ಹೋಗಿರುವ ಜನರು ಪ್ರತಿಭಟನೆಯ ಬಿಸಿ ಮುಟ್ಟಿಸಲಿದ್ದಾರೆ ಎಂದು ಹೇಳಲಾಗಿದೆ.

ಸೇತುವೆ ಬಿರುಕು ಬಿಟ್ಟಿದೆ. ಆ ಕಾರಣದಿಂದ ಅಲ್ಲಿ ಘನ ವಾಹನಗಳು ಸಂಚಾರಿಸದಂತೆ ಜಿಲ್ಲಾಧಿಕಾರಿ ಕಚೇರಿಯು ಏಕಾಏಕಿ ಸೇತುವೆ ಬಂದ್ ಮಾಡಿದ್ರು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಎಂದರು ಅದಕ್ಕೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ, ಸೇತುವೆ ಸಾಮರ್ಥ್ಯ ಪರೀಕ್ಷಾ ಯಂತ್ರ ಬರಲಿ ಎಂದು ಹೇಳಿದ್ರು ಅದು ಬಂದು ಪರೀಕ್ಷೆ ಮಾಡಿ ಒಂದು ತಿಂಗಳು ಆಗುತ್ತಾ ಬರುತ್ತಿದೆ.

ಅದರು ಇನ್ನು ವರದಿ ಬಂದಿಲ್ಲ.ನಮ್ಮೂರಿನ ಗ್ರಾಮಸ್ಥರು ಎಷ್ಠುಸಮಯ ತಮ್ಮ ಕಷ್ಠಗಳನ್ನು ಸಹಿಸಿಕೊಂಡಿರಬೇಕು. ಇನ್ನಾದರೂ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡು ಕೂಡಲೇ ಸಮಸ್ಯೆ ಪರಿಹರಿಸದಿದ್ದಲ್ಲಿ ಪ್ರತಿಭಟನೆ ಖಚಿತ ಎಂದು ಊರಿನ ನಾಗರಿಕರು ನಿರ್ಧಾರಕ್ಕೆ ಬಂದಿದ್ದಾರೆ.