ಕೊಕ್ಕಡ: ಮನೆಯ ಜಗಲಿಯಲ್ಲಿ ಕುಳಿತು ಚಾಹ ಕುಡಿಯುತ್ತಿದ್ದ ವೇಳೆ ಢಿಕ್ಕಿ ಹೊಡೆದ ಕಾರು, ಬಾಲಕ ಸಾವು

ಕೊಕ್ಕಡ: ಬೆಳ್ತಂಗಡಿಯ ಕೊಕ್ಕಡದ ಮಲ್ಲಿಗೆ ಮಜಲು ಎಂಬಲ್ಲಿ ಕಾರು ಡಿಕ್ಕಿಯಾಗಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆ ಮಂಗಳವಾರ (ಅ.1) ನಡೆದಿದೆ. ಮೃತರ ವಿದ್ಯಾರ್ಥಿಯನ್ನು ನವಾಫ್ ಇಸ್ಮಾಯಿಲ್ (9) ಗುರುತಿಸಲಾಗಿದೆ. ಕೊಕ್ಕಡ ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರನಾಗಿರುವ ನವಾಫ್ ಇಸ್ಮಾಯಿಲ್ ನವಾಫ್ ಆತೂರಿನ ಆಯೇಷಾ ಶಾಲೆಯಲ್ಲಿ 4ನೇ ತರಗತಿ ವಿದ್ಯಾಭಾಸ್ಯ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಶಾಲೆಯಿಂದ ಮನೆಗೆ ಬಂದ ನಂತರ ನವಾಫ್ ಇಸ್ಮಾಯಿಲ್ ಮನೆಯ ಸಿಟ್-ಔಟ್ ಪ್ರದೇಶದಲ್ಲಿ ಕುಳಿತು ಚಹಾವನ್ನು ಕುಡಿಯುತ್ತಿರುವ ವೇಳೆ ಸಂಬಂಧಿಯೊಬ್ಬರು ಅಂಗಳದಲ್ಲಿ ಕಾರನ್ನು ಓಡಿಸುತ್ತಿದ್ದಾಗ, ಕಾರಿನ ಕ್ಲಚ್ ಜಾಮ್ ಆಗಿ ನವಾಫ್ ಇಸ್ಮಾಯಿಲ್ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಢಿಕ್ಕಿ ಹೊಡೆದ ತಕ್ಷಣ ಬಾಲಕನ್ನು ಪುತ್ತೂರಿನ ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ. ಈ ವೇಳೆ ಮಾರ್ಗ ಮಧ್ಯದಲ್ಲಿ ನವಾಫ್ ಇಸ್ಮಾಯಿಲ್ ಕೊನೆಯುಸಿರು ಬಿಟ್ಟಿದ್ದಾನೆ. ಇದೇ ವೇಳೆ ಇನ್ನೊಂದು ಮಗು ಕೂಡ ಮನೆಯ ಅಂಗಳದಲ್ಲಿತ್ತು ಎಂದು ಹೇಳಲಾಗಿದೆ. ಅದೃಷ್ಟವಶಾತ್ ಆ ಮಗುವಿಗೆ ಯಾವುದೇ ಅಪಾಯ ಆಗಿಲ್ಲ.