ಫಲ್ಗುಣಿ ನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಇಬ್ಬರು ಯುವಕರು
ಫಲ್ಗುಣಿ ನದಿಯಲ್ಲಿ ಭಾನುವಾರ ಸಂಜೆ ಈಜಲು ಹೋಗಿದ್ದ ನಾಲ್ಕು ಮಂದಿಯಲ್ಲಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ಈ ಘಟನೆ ಮಳವೂರು ರೈಲ್ವೇ ಸೇತುವೆಯ ಸಮೀಪದ ಫಲ್ಗುಣಿ ನದಿಯಲ್ಲಿ ನಡೆದಿದೆ. ಮಂಗಳೂರು ನಗರದ ಕೋಡಿಕಲ್‌ನ ನಿವಾಸಿಗಳಾದ ಅರುಣ್ (19), ದೀಕ್ಷಿತ್ (20), ಕೊಟ್ಟಾರ ಚೌಕಿಯ ಸುಮಿತ್ (20) ಹಾಗೂ ಉರ್ವಸ್ಟೋರಿನ ಅನಿಶ್ (19) ಎಂಬ ನಾಲ್ಕು ಹುಡುಗರು ನದಿಯಲ್ಲಿ ಈಜಾಡಲು ಹೋಗಿದ್ದಾರೆ.
ಇವರಲ್ಲಿ ಸುಮಿತ್ ಹಾಗೂ ಅನಿಶ್ ನದಿ ನೀರಿನ ಸುಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ಇನ್ನು ಸ್ಥಳಕ್ಕೆ ಬಜಪೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಬಂದು ಹುಡುಕಾಟ ನಡೆಸಿದ್ದಾರೆ, ಈ ಬಗ್ಗೆ ಅಲ್ಲಿ ಸ್ಥಳೀಯರಲ್ಲೂ ಕೂಡ ಮಾಹಿತಿಯನ್ನು ಪಡೆದಿದ್ದಾರೆ.
ಇನ್ನು ಸುಮಿತ್ ಹಾಗೂ ಅನಿಶ್ ಪತ್ತೆ ಕಾರ್ಯಚರಣೆ ಮುಂದುವರಿದಿದೆ. ಸುಮಿತ್ ಕೊಟ್ಟಾರ ಎಂಬ ಯುವಕ ಚೌಕಿಯಲ್ಲಿನ ಗ್ಯಾರೇಜ್ ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಅನಿಶ್ ಸೋಡಾ ಫಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.