Published On: Thu, Sep 26th, 2024

ಕಲ್ಲಡ್ಕದಲ್ಲಿ‌‌‌ ಸ್ವಚ್ಛತಾ ಹೀ ಸೇವಾ ೨೦೨೪ ಕಾರ್ಯಕ್ರಮ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆದಾಯ ತೆರಿಗೆ ಇಲಾಖೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ -೨೦೨೪”  ಕಾರ್ಯಕ್ರಮ ಸಾಧನಾ ಸಭಾಂಗಣದಲ್ಲಿ ನಡೆಯಿತು. 

 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆದಾಯ ತೆರಿಗೆ  ಇಲಾಖೆಯ ನಿರ್ದೇಶಕ  ಸ್ವರೂಪ್ ಮಾರ್ನವ ಇವರು ಕಾಲೇಜಿನ ವಾತಾವರಣ ಮತ್ತು ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಚಿತ್ವ ಎಂಬ ಮನೋಭಾವ  ಮೊದಲು ಮನೆಯಿಂದ ಆರಂಭವಾದರೆ ಬಳಿಕ ಅದು ಮನೆ, ಸಂಸ್ಥೆಯಲ್ಲಿ ತನ್ನಿಂದ ತಾನೇ  ರೂಪುಗೊಳ್ಳುತ್ತದೆ ಎಂದರು.

  ಮಂಗಳೂರಿನ ಆದಾಯ ತೆರಿಗೆ ಉಪ ನಿರ್ದೇಶಕ  ರಮಿತ್ ಚೆನ್ನಿತಲ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಶ್ರೀಮಾನ್, ಎನ್ ಎಸ್ ಎಸ್ ಘಟಕದ ನಿರ್ದೇಶಕರಾದ  ಯತಿರಾಜ್ ಶ್ರೀಮಾನ್, ಆದಾಯ ತೆರಿಗೆ ಅಧಿಕಾರಿ ಸುನಿಲ್ ಗೋರೆ ಉಪಸ್ಥಿತರಿದ್ದರು.  ಉಪನ್ಯಾಸಕಿ ತೃಪ್ತಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

ಸಭಾಕಾರ್ಯಕ್ರಮದ ಬಳಿಕ ಕಾಲೇಜಿನ ಎದುರುಗಡೆ ಗಿಡ ನಾಟಿ ಮಾಡಲಾಯಿತು.  ವಿದ್ಯಾಕೇಂದ್ರದ ಸುತ್ತ ಮತ್ತು ಕಲ್ಲಡ್ಕ ಪೇಟೆಯ ಪರಿಸರದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಸವನ್ನು ಹೆಕ್ಕಿ ಶುಚಿಗೊಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter