ಬಂಟ್ವಾಳ:ಇಲ್ಲಿನ ತಾಲ್ಲೂಕಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸದಸ್ಯರು ಒಟ್ಟು ಸೇರಿಕೊಂಡು ಬೆಳ್ತ್ತಂಗಡಿ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಈಚೆಗೆ ತೆರಳಿ ಅಕ್ಕಿ ಸಹಿತ ರೂ 1ಲಕ್ಷ ಮೌಲ್ಯದ 1 ಟನ್ ಆಹಾರ ಸಾಮಾಗ್ರಿ ಕೊಡುಗೆ ಹಸ್ತಾಂತರಿಸಿ ಗಮನ ಸೆಳೆದರು.


ಸಿಯೋನ್ ಆಶ್ರಮದ ಆಡಳಿ ನಿರ್ಧೇಶಕ ಯು.ಸಿ.ಪೌಲ್ ಮಾತನಾಡಿ, ‘ಸುಮಾರು 387 ಮಂದಿ ಮಾನಸಿಕ ಮತ್ತು ವಿಕಲ ಚೇತನರು ಸೇರಿದಂತೆ ನಿರಾಶ್ರಿತರಿಗೆ ಸಿಯೋನ್ ಆಶ್ರಮ ಉಚಿತ ಸೇವೆ ನೀಡುತ್ತಿದೆ. ಬಂಟ್ವಾಳದ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ರೂ 1 ಲಕ್ಷ ಮೌಲ್ಯದ ಅಕ್ಕಿ ಸಹಿತ ತೊಗರಿಬೇಳೆ, ಹೆಸರು ಬೇಳೆ, ಕಡ್ಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ, ಮೆಣಸು, ಎಣ್ಣೆ, ಸಾಬೂನು, ಟೂತ್ ಪೇಸ್ಟ್ ಮತ್ತಿತರ ಸಾಮಾಗ್ರಿ ಒದಗಿಸಿ ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷೆ ಶೃತಿ ಮಾಡ್ತಾ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ, ಪ್ರಮುಖರಾದ ಹರೀಶ ಶೆಟ್ಟಿ ಬಂಟ್ವಾಳ, ವಿಜಯ ಫೆರ್ನಾಂಡಿಸ್, ಸೆಬೆಸ್ಟಿನ್ ಮಿನೇಜಸ್, ಪ್ರವೀಣ್ ಫೆರ್ನಾಂಡಿಸ್ ಉಜಿರೆ, ರೂಪಾ ಆರ್.ಶೆಟ್ಟಿ, ಪ್ರೀತಾ ಸಿಕ್ವೇರ, ಪವನಿ ಹರೀಶ ಶೆಟ್ಟಿ ಮತ್ತಿತರರು ಇದ್ದರು. ಇದೇ ವೇಳೆ ಯು.ಸಿ.ಪೌಲ್ ದಂಪತಿಯನ್ನು ಸನ್ಮಾನಿಸಲಾಯಿತು.
ಸಿಯೋನ್ ಆಶ್ರಮದ ಆಡಳಿ ನಿರ್ದೇಶಕ ಯು.ಸಿ.ಪೌಲ್ ಸ್ವಾಗತಿಸಿ, ವಂದಿಸಿದರು

By Suddi9

Leave a Reply

Your email address will not be published. Required fields are marked *