ಬಂಟ್ವಾಳ:  ಸಂತ ಅಂತೋನಿಯವರ ದೇವಾಲಯ ಅಲ್ಲಿಪಾದೆ ಹಾಗೂ ಸ್ತ್ರೀ ಸಂಘಟನೆ ಅಲ್ಲಿಪಾದೆ ಘಟಕ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ನೇತೃತ್ವದಲ್ಲಿ ಸ್ತ್ರೀ ಆಯೋಗ, ಅರೋಗ್ಯ, ಯುವ ಆಯೋಗ ಇವರ ಸಹಕಾರದೊಂದಿಗೆ ಅಲ್ಲಿಪಾದೆ ಸೌಹಾರ್ದ ಸಭಾ ಭವನದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರವು ನಡೆಯಿತು.


ಸಂತ ಅಂತೋನಿ‌ಯವರ ದೇವಾಲಯದ ವಂ. ಫಾ. ರೋಬರ್ಟ್ ಡಿ ಸೋಜ ರವರು ಶಿಬತವನ್ನು ಉದ್ಘಾಟಿಸಿದರು.
ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರಾದ ಡಾ. ಜ್ಞಾನೇಶ್ವರಿ ಜಯರಾಮ್, ಡಾ. ಸೋನಿಯಾ ಕೆ.ಎಲ್ ಸಿಕ್ವೇರಾ, ಪ್ರಮುಖರಾದ ರಂಜನ್ ಎ.ವಿ,ಕ್ಲುನಿ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ನಸಿಸಾ, ನವೀನ್ ಮೊರಸ್, ಕಿರಣ್ ನೊರೊನ್ಹಾ,ಜೋನ್ ವಾಲ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಅಲ್ಲಿಪಾದೆ ಸ್ತ್ರೀ ಸಂಘದ ಅಧ್ಯಕ್ಷರಾದ  ಲವೀನಾ ಮೋರಸ್ ಸ್ವಾಗತಿಸಿದರು. ಕು. ವೆನೆಸ್ಸಾ ಮೊರಸ್ ಕಾರ್ಯಕ್ರಮವನ್ನು ನಿರೂಪಿಸಿದರು. ರೆನ್ನಿ ಫೆರ್ನಾಂಡಿಸ್ ರವರು ವಂದಿಸಿದರು.

By Suddi9

Leave a Reply

Your email address will not be published. Required fields are marked *