Published On: Thu, Sep 26th, 2024

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ೨೩ನೇ ವರ್ಷದ ನವದಂಪತಿ ಸಮಾವೇಶ

ಬಂಟ್ವಾಳ: ನೂತನವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ನವದಂಪತಿಗಳ ಸಮಾವೇಶವು ತಳಿರು ತೋರಣಗಳಿಂದ ಅಲಂಕೃತಗೊಂಡ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ಪ್ರಭು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಗೈದು ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕುಟುಂಬ ಪ್ರಭೋದನ್ ಸಹಸಂಯೋಜಕರಾದ  ಸುಬ್ರಾಯ ನಂದೋಡಿ ಮತ್ತು  ಜಯಲಕ್ಷ್ಮೀ ನಂದೋಡಿ ಅವರು  ತಮ್ಮ ಜೀವನದ ಅನುಭವನಗಳನ್ನು ಹಂಚಿಕೊಂಡರು. 

 ರಾ.ಸ್ವ.ಸೇ.ಸಂಘದ ಪ್ರಮುಖ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಧರ್ಮ ಸಂಸ್ಕೃತಿಯ ಕೇಂದ್ರ ಬಿಂದುವಾದ ನಮ್ಮ ಮನೆ, ನಮ್ಮ ಕುಟುಂಬವನ್ನು ನಾವು ರಕ್ಷಣೆ ಮಾಡಬೇಕು. ಹಿಂದೂ ಸಮಾಜ ಉಳಿದಿರುವುದು ಪರಸ್ಪರ ನಂಬಿಕೆ, ತಿಳುವಳಿಕೆಯಿಂದ ಎಂದು  ತಿಳಿಸಿದರು. 

 ಅತಿಥಿಯಾಗಿದ್ದ‌ ಗಜಾನನ ಪೈ ಅವರು ಮಾತನಾಡಿ ನಾವು ಧರ್ಮ ಮಾರ್ಗದಲ್ಲಿ ನಡೆಯುವಂತಹ ಪ್ರಜೆಗಳು ನಮ್ಮದು ಸನಾತನ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ನಡೆದುಕೊಂಡು ಬಂದಿದ್ದು,ಈ ಪರಂಪರೆಯನ್ನು ಮುಂದುವರಿಸಬೇಕು, ಇದಕ್ಕೆ ಬೇಕಾದಂತಹ ಸಂಸ್ಕಾರ ಕೊಡಬೇಕು ಎಂದು ಹೇಳಿದರು. 

ಸಮಾರೋಪ ಸಮಾರಂಭದಲ್ಲಿ ಹಿರಿಯರಾದ ಸು.ರಾಮಣ್ಣನವರು ದಂಪತಿಗಳಿಂದ ಓಂಕಾರ ಮತ್ತು ರಾಮತಾರಕ ಮಂತ್ರವನ್ನು ಹೇಳಿಸಿದರು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಸಂಸಾರ ಪಥದಲ್ಲಿ ಸಾಗುವಾಗ ದಂಪತಿಗಳಲ್ಲಿ ತಾಳ್ಮೆ, ಹೊಂದಾಣಿಕೆ, ಪರಸ್ಪರ ಅರ್ಥೈಸಿಕೊಳ್ಳುವುದು ತುಂಬಾ ಅಗತ್ಯವೆಂದು ಮಾರ್ಗದರ್ಶನ ಮಾಡಿದರು.

ಕರ‍್ಯಕ್ರಮದಲ್ಲಿ ೫೨ ದಂಪತಿಗಳು ಭಾಗವಹಿಸಿದ್ದು, ಬಂದಿರುವ ಎಲ್ಲಾ ನವದಂಪತಿಗಳ ಪಾದ ತೊಳೆದು ಸ್ವಾಗತಿಸಿ, ಅಗ್ನಿ ಕುಂಡಕ್ಕೆ ಅರ್ಘ್ಯ ಅರ್ಪಿಸಿ ದಂಪತಿಗಳನ್ನು ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ವೇದವ್ಯಾಸ ಸಭಾಂಗಣಕ್ಕೆ ಕರೆದೊಯ್ಯಲಾಯಿತು.

 ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಡಾ. ಕಮಲಾ ಭಟ್ ಹಾಗೂ  ಸುಮಿತಾ ಪೈ., ಸಹಸಂಚಾಲಕರಾದ ರಮೇಶ್ ಎನ್., ಉಪಸ್ಥಿತರಿದ್ದರು.

ಶಿಶುಮಂದಿರ ಮಾತೃಭಾರತಿ ಸದಸ್ಯರು ಮತ್ತು ಪೋಷಕರು ಸ್ವಯಂಸೇವಕರಾಗಿ ಕಾರ‍್ಯ ನಿರ್ವಹಿಸಿದರು. ಶ್ರೀರಾಮ ಶಿಶುಮಂದಿರದ ಮಾತೃಭಾರತಿಯ ಸದಸ್ಯೆಯರಾದ  ಹರ್ಷಿತಾ ಸ್ವಾಗತಿಸಿ,  ಸ್ವಾತಿ ಪ್ರಾರ್ಥಿಸಿದರು,  ಸೌಮ್ಯ ವಂದಿಸಿದರು,ಗುರುಪ್ರಿಯ ವ್ಯಯ್ಯಕ್ತಿಕ ಗೀತೆ ಹಾಡಿದರು. ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ  ಚೈತ್ರ ಕಾರ‍್ಯಕ್ರಮ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter