ಸೇವಾದಳ ಶಿಕ್ಷಕ, ಶಿಕ್ಷಕಿಯರ ಪುನಶ್ಚೇತನ ಕಾರ್ಯಾಗಾರ
ಬಂಟ್ವಾಳ: ಭಾರತ ಸೇವಾದಳ ಬಂಟ್ವಾಳ ತಾಲೂಕು ಸಮಿತಿ ಹಾಗೂ ಸ. ಹಿ. ಪ್ರಾ. ಶಾಲೆ ನರಿಕೊಂಬು ಇದರ ಆಶ್ರಯದಲ್ಲಿ ಸೇವಾದಳ ಶಿಕ್ಷಕ, ಶಿಕ್ಷಕಿಯರ(ಶಾಖಾ ನಾಯಕರು) ಪುನಶ್ಚೇತನ ಕಾರ್ಯಾಗಾರವು ನರಿಕೊಂಬು ಶಾಲೆಯಲ್ಲಿ ನಡೆಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿ ಅಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಸೇವಾದಳದ ತಾಲೂಕು ಸಮಿತಿ ಅಧ್ಯಕ್ಷರಾದ ಟಿ ಶೇಷಪ್ಪ ಮಾಸ್ಟರ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬಾಲ್ಯದಲ್ಲಿಯೇ ಮಕ್ಕಳಿಗೆ ಇಂತಹ ಸ್ವಯಂ ಸೇವಾ ಸಂಸ್ಥೆ ಗಳಿಗೆ ಸೇರಿಸಿ ತರಬೇತಿ ನೀಡಿದಾಗ ಮುಂದೆ ಯೋಗ್ಯ, ಪ್ರಜ್ಞಾವಂತ ರಾಷ್ಟ್ರಪ್ರೇಮಿ ಪ್ರಜೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸೇವಾದಳ ಶಿಕ್ಷಕಿ,ಬೊಂಡಾಲ ಶಾಲಾ ಮುಖ್ಯ ಶಿಕ್ಷಕಿ ರೇಖಾ ಹಾಗೂ ನರಿಕೊಂಬು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿಯರನ್ನು ಗೌರವಿಸಲಾಯಿತು.
ಶಿಕ್ಷಕರು ಹಾಗೂ ಸೇವಾದಳ ಸ್ವಯಂಸೇವಕರು ಭಾಗವಹಿಸಿದ್ದರು. ಸೇವಾದಳ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಶೋಭಾ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಸಿಕ್ವೇರ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಸೇವಾದಳದ ಜಿಲ್ಲಾ ಸಂಘಟಕರಾದ ಮಂಜೇಗೌಡ ಪ್ರಸ್ತಾವಿಸಿದರು.ಶಿಕ್ಷಕ ಪರಮೇಶ್ವರ್ ವಂದಿಸಿದರು.ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು.