ತುಂಬೆ: ಸ್ವಚ್ಚತಾ ಸೇವೆ- 2024 ಕ್ಕೆ ಚಾಲನೆ
ಬಂಟ್ವಾಳ :ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಶಕ್ತಿ ಸಚಿವಾಲಯ ಭಾರತ ಸರಕಾರ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರದ ವತಿಯಿಂದ ಅ. 02 ರವರೆಗೆ ನಡೆಯುವ ಸ್ವಚ್ಚತಾ ಸೇವೆ- 2024 ರ ಪ್ರಯುಕ್ತ ತುಂಬೆ ಗ್ರಾ ಪಂ.ವ್ಯಾಪ್ತಿಯ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಜಯಂತಿ ಕೇಶವ ಹಾಗೂ ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ ಅವರ ನೇತೃತ್ವದಲ್ಲಿ ಗ್ರಾ. ಪಂ ಕಛೇರಿ ರಸ್ತೆಯಿಂದ ರಾಮಲ್ ಕಟ್ಟೆ ರಾಷ್ಟ್ರೀಯ ಹೆದ್ದಾರಿ ಉಮಣಗುಡ್ಡೆಯ ವರೆಗೆ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾ ಪಂ ವತಿಯಿಂದ ಪೌರ ಕಾರ್ಮಿಕರಿಗೆ ಸಮವಸ್ತ್ರವಿತರಿಸಲಾಯಿತು. ಅಭಿವೃದ್ದಿ ಅಧಿಕಾರಿ ಶಿವಾಲಾಲ್ ಚೌಹಾಣ್ ಸ್ವಾಗತಿಸಿ ಪ್ರಸ್ತಾವನೆಗೈದರು. ಮಾಜಿ ಅಧ್ಯಕ್ಷ ಪ್ರವೀಣ್ ಬಿ ತುಂಬೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು.
ಗ್ರಾ.ಪಂ ಸದಸ್ಯರಾದ ಇಬ್ರಾಹಿಂ ವಳವೂರು ಕಿಶೋರ್ ರಾಮಲ್ ಕಟ್ಟೆ, ಮಹಮ್ಮದ್ ಝಹೂರ್, ಹೇಮಲತಾಜಿ ಪೂಜಾರಿ, ಜಯಂತಿ ನಾಗೇಶ್ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರಾದ ಜಗದಿಶ ಗಟ್ಟಿ, ಉಮರಬ್ಬ ಕುಚ್ಚಿಗುಡ್ಡೆ, ಮೂಸಬ್ಬ ತುಂಬೆ, ನವೀನ್‌ಕಲ್ಲಗುಡ್ಡೆ ಹಾಗೂ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಚಂದ್ರಕಲಾ ಜಿ ವಂದಿಸಿದರು.