ಬಂಟ್ವಾಳ: ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆಯು ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪುಷ್ಪರಾಜ ಚೌಟ ವಹಿದರು.
ಸಂಘವು 2023-24ನೇ ಕೊನೆಗೆ ರೂ. 52,62,14,083/- ಠೇವಣಿ ಹೊಂದಿದ್ದು ವರದಿ ವರ್ಷದಲ್ಲಿ ಒಟ್ಟು ರೂ. 29,61,66,624/-ನ್ನು ಸಾಲ ವಿತರಿಸಲಾಗಿದೆ, ವರ್ಷಾಂತ್ಯಕ್ಕೆ ರೂ. 30,11,67,387/- ಸಾಲ ಹೊಂದಿರುತ್ತದೆ ಹಾಗೂ ರೂ. 6,72,73,268/- ರಷ್ಟು ಕ್ಷೇಮ ನಿಧಿ ಹಾಗೂ ಇತರ ನಿಧಿಗಳನ್ನು ಸಂಘ ಹೊಂದಿದೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋದ ಬಿ. 2022-23ನೇ ವರ್ಷದ ವರದಿ ಮಂಡಿಸಿದರು. ಸಂಘ 2022-23ರಲ್ಲಿ ರೂ. 346,89,62,567/- ರಷ್ಟು ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ ರೂ. 1,00,36,610.77/- ರಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಆಡಳಿತ ಮಂಡಳಿಯವರು
ಪ್ರಸಕ್ತ ವರದಿ ಸಾಲಿನಲ್ಲಿ ಸದಸ್ಯರಿಗೆ ಶೇ 13% ರ ಡಿವಿಡೆಂಡ್‌ನ್ನು ಘೋಷಣೆ ಮಾಡಿರುತ್ತಾರೆ ಎಂದು ತಿಳಿಸಿದರು.
ಕಂಬಳ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಉಮೇಶ್ ಮಹಾಬಲ ಶೆಟ್ಟಿ ಮಾಣಿ, ದೆಹಲಿ ಯಲ್ಲಿ ನಡೆದ ಶ್ಲೋಕ ಅಂತ್ಯಕ್ಷರಿ ಸ್ಪರ್ಧೆ ಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ತೃತಿಯ ಸ್ಥಾನವನ್ನು ಪಡೆದ ಶ್ರೀ ಸೀತಾರಾಮ ಬನ್ನಿಂತಾಯ ಕೊಬ್ರಿಮಠ , ತಿರುಪತಿ ತಿರುಮಲ ದೇವಸ್ಥಾನದಲ್ಲಿ ವೇದ ಪಂಡಿತರು ಶ್ರೀ ಶಂಕರನಾರಾಯಣ ಭಟ್, ಸಹಕಾರಿ ರತ್ನ ಪ್ರಶಸ್ತಿ ವಿಜೇತರು ಶ್ರೀ ಸುರೇಶ್ ರೈ ಅಂತರಗುತ್ತು, ನಾಟಿ ವೈದ್ಯ ಗಂಗಾಧರ ಪಂಡಿತ, ಪ್ರಾಥಮಿಕ ಅರೋಗ್ಯ ಕೇಂದ್ರ ಮಾಣಿ ಇದರ ವೈಧ್ಯಾಧಿಕಾರಿ ಡಾ. ಶಶಿಕಲಾ, ರಾಜ್ಯಮಟ್ಟದ ಕಬ್ಬಡಿ ಆಟಗಾರ, ಬಿ. ಎಂ. ಟಿ. ಸಿ ಉದ್ಯೋಗಿ ಶರತ್ ಗೌಡ ಮಂಜೊಟ್ಟಿ ಮತ್ತು ಸಂಘದ ನಿವೃತ್ತ ಗುಮಾಸ್ತರಾದ ಯಂ ಗಿರಿಯಪ್ಪ ಪೂಜಾರಿ ಮಾಣಿ ಹಾಗೂ ಮಾಣಿ ಮೆಸ್ಕಾಂ ಇದರ 8 ಜನ ಲೈನ್ ಮ್ಯಾನ್ ಗಳನ್ನು ಮತ್ತು ಸಂಘದ ವ್ಯಾಪ್ತಿಗೆ ಸೇರಿದ ಅನಂತಾಡಿ, ನೆಟ್ಲಮುನ್ನೂರು, ಪೆರಾಜೆ ಮಾಣಿ ಗ್ರಾಮದ 12 ಮಂದಿ ಹಿರಿಯ ಸಹಕಾರಿಗಳನ್ನು ಮತ್ತು ಪ್ರಾಥಮಿಕ, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ತರಗತಿಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಹಾಸಭೆ ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ನಾರಾಯಣ ಶೆಟ್ಟಿ ಕೆ, ವೆಂಕಟೇಶ ಕೋಟ್ಯಾನ್, ರಾಘವ ಗೌಡ, ಶ್ರೀನಿವಾಸ ಪೂಜಾರಿ, ಸುಧಾಕರ ನಾಯ್ಕ, ನಿರಂಜನ್ ರೈ, ಪಾಂಡುರಂಗ ಎ. ಕಾಮತ್, ಸಂಕಪ್ಪ ಜೆ, ಭಾರತಿ ಹಾಗೂ ಶಾಲಿನಿ ಉಪಸ್ಥಿತರಿದ್ದರು. ಗುಮಾಸ್ತ ರವಿ ಎನ್. ಇವರು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಡಿ, ತನಿಯಪ್ಪ ಗೌಡ ಸ್ವಾಗತಿಸಿದರು ನಿರ್ದೇಶಕ ಸನತ್ ಕುಮಾರ್ ರೈ ವಂದಿಸಿದರು.