ಪೊಳಲಿ ಸೇತುವೆ ಸಾಮರ್ಥ್ಯ ಪರೀಕ್ಷೆ ಮುಗಿಸಿ ತೆರಳಿದ ಯಂತ್ರ# ಪೊಳಲಿ ಸೇತುವೆಯ ಸಾಮಥ್ಯ೯ ಕುರಿತ ವರದಿಗೆ ಒಂದು ವಾರ ವಿಸ್ತರಣೆ
ಬಂಟ್ವಾಳ: ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಸೋಮವಾರದಂದು ಪೊಳಲಿ(ಅಡ್ಡೂರು) ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆಗಾಗಿ ಬಂದಿದ್ದ ಪರೀಕ್ಷಾ ಯಂತ್ರ ಗುರುವಾರ ಸೇತುವೆಯ ಸಾಮಥ್ಯ೯ ಮುಗಿಸಿ ಇಲ್ಲಿಂದ ಸದ್ದಿಲ್ಲದೆ ತೆರಳಿದೆ.

ಸೆ.9ರಂದು ಸಾಮಥ್ಯ೯ ಪರೀಕ್ಷಾ ಯಂತ್ರ ಪೊಳಲಿ ಸೇತುವೆಯಲ್ಲಿ ಬಂದಿಳಿದಿದ್ದು, ಮೂರು ದಿನಗಳಸೇತುವೆಯಲ್ಲೇ ಇದ್ದು,ಸೇತುವೆಯ ಪ್ರತಿ ಕಂಬ(ಕುಂದ)ದ ಸಾಮರ್ಥ್ಯ ಪರೀಕ್ಷಿಸಿದೆ ಎಂದುತಿಳಿದು ಬಂದಿದೆ. ಪೊಳಲಿ ಸೇತುವೆಯ ಸಾಮಥ್ಯ೯ ಕುರಿತ ವರದಿಯನ್ನು ಮೂರ್ನಾಲ್ಕುದಿನದೊಳಗೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಗೆ ಸಲ್ಲಿಸಲಿದ್ದು,ಆಬಳಿಕ ಇವರು ಈ ವರದಿಯನ್ನುಜಿಲ್ಲಾಧಿಕಾರಿಯವರಿಗೆ ಒಪ್ಪಿಸಲಿದ್ದಾರೆ.ತದನಂತರ ಈ ವರದಿಯನ್ನಾಧರಿಸಿ ಜಿಲ್ಲಾಧಿಕಾರಿಯವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಈ ನಡುವೆ ಪೊಳಲಿ ಸೇತುವೆ ಹೋರಾಟ ಸಮಿತಿ ವರದಿಯ ಕುರಿತಂತೆ ವಾರದ ಕಾಲ ಕಾದುನೋಡಿ ,ನಂತರ ತಮ್ಮ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ತಿಳಿದುಬಂದಿದೆ.
ಪೊಳಲಿ ಸೇತುವೆಯ ದುರಸ್ಥಿಯ ನೆಪದಲ್ಲಿ ಜಿಲ್ಲಾಡಳಿತ ಏಕಾಏಕಿ ಘನವಾಹನಗಳ ಸಂಚಾರವನ್ನು ನಿರ್ಬಂಧಿಸಿದಲ್ಲದೆ ಎರಡೂ ಬದಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಮಿಸಿ ಕಣ್ಗಾವಲು ಹಾಕಿದ್ದು,ಇದರ ಪರಿಣಾಮ ಪೊಳಲಿ ಅಸುಪಾಸಿನ ಗ್ರಾಮಸ್ಥರು,ಶಾಲಾ ಮಕ್ಕಳು ಹಾಗೂ ಪೊಳಲಿ ಕ್ಷೇತ್ರಕ್ಕಾಗಮಿಸುವ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಈ ನಡುವೆ ಸೇತುವೆಯ ವಸ್ತುಸ್ಥಿತಿ ಪರಿಶೀಲಿಸಲು ಅಗಮಿಸಿದ್ದ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು ಗ್ರಾಮಸ್ಥರ ಅಹವಾಲು ಆಲಿಸಿ ಧಾರಣಾ ಪರೀಕ್ಷಾ ಯಂತ್ರ ಪರಿಶೀಲಿಸಿ ನೀಡುವ ವರಧಿಯನ್ನಾಧರಿಸಿ ಕ್ರಮಕೈಹೊಳ್ಳುವ ಭರವಸೆ ನೀಡಿದ್ದರು.
ಸೋಮವಾರ ಪೊಳಲಿಯ ಸರ್ವಮಂಗಳ ಸಭಾಭವನದಲ್ಲಿ ಸ್ಥಳೀಯ ನಾಲ್ಕೈದು ಗ್ರಾಮದ ಗ್ರಾಮಸ್ಥರು ಸಭೆ ಸೇರಿ ಚರ್ಚಿಸುತ್ತಿರುವಾಗಲೇ ಕಾಕತಾಳೀಯ ಎಂಬಂತೆ ಧಾರಣಾ ಸಾಮರ್ಥ್ಯದ ಯಂತ್ರ ಪೊಳಲಿ ಸೇತುವೆಯ ಮೇಲೆ ಬಂದಿಳಿದಿತ್ತು.
ಇದೀಗ ಧಾರಣಾ ಸಾಮಥ್ಯ೯ ಯಂತ್ರ ತನ್ನ ಪರೀಕ್ಷಾ ಕಾರ್ಯ ಮುಗಿಸಿ ಇಲ್ಲಿಂದ ತೆರಳಿದೆ. ಪೊಳಲಿ ಅಸುಪಾಸಿನ ನಾಗರಿಕರು,ಹೋರಾಟ ಸಮಿತಿ ಸದ್ಯ ಇದರ ವರದಿಯ ನಿರೀಕ್ಷೆಯಲ್ಲಿದ್ದಾರೆ.