ಮಂಗಳೂರು: ಓವರ್ ಲೋಡ್, ಹೈ ಸ್ಪೀಡ್ನಿಂದ ಜನರ ಪ್ರಾಣಕ್ಕೆ ಕಂಟಕವಾಗುತ್ತಿದೆ ಖಾಸಗಿ ಬಸ್ಗಳು

ಖಾಸಗಿ ಬಸ್ಗಳ ಕಿರಿಕಿರಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇದೀಗ ಮತ್ತೆ ಇವರ ದರ್ಬಾರ್ನಿಂದ ಕರಾವಳಿ ಜನ ಹೈರಾಣಾರಾಗಿದ್ದಾರೆ. ಖಾಸಗಿ ಬಸ್ಗಳು ಓವರ್ ಲೋಡ್ ಜೊತೆ ಹೈ ಸ್ಪೀಡ್ನಿಂದ ಜನರ ಪ್ರಾಣ ಕಂಟಕ ಉಂಟಾಗಿದೆ. ಓವರ್ ಲೋಡ್ ನಿಂದ ವಿದ್ಯಾರ್ಥಿಯೊಬ್ಬ ಬಸ್ಸಿನಿಂದ ಕೆಳಗೆ ಬಿದ್ದಿದ್ದಾರೆ. ವಿದ್ಯಾರ್ಥಿ ಕೆಳಗೆ ಬೀಳೋ ದೃಷ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ತಲಪಾಡಿಯಿಂದ ಮಂಗಳೂರಿಗೆ ಬರೋ ಖಾಸಗಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಕಾಂಪಿಟೀಷನ್ನಿಂದ ನಿತ್ಯ ಓವರ್ ಸ್ಪೀಡ್-ಓವರ್ ಲೋಡ್ ಮಾಡಿಕೊಂಡು ಕೆಲವು ಬಸ್ ಓಡಾಡುತ್ತದೆ. ಒನ್ ವೇಗಳಲ್ಲಿ ಖಾಸಗಿ ಬಸ್ಗಳು ನುಗ್ಗುತ್ತಿದೆ. ಎಲ್ಲೆಂದರಲ್ಲಿ ಸ್ಟಾಪ್ ಕೊಟ್ಟು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದೆ. ಈ ಬಗ್ಗೆ ಆರ್.ಟಿ.ಓ. ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.