ಮಂಗಳೂರು: ವಕ್ಫ್ ಆಸ್ತಿ ಹಿಂದೆಯೂ ಮುಸಲ್ಮಾನರದ್ದು, ಮುಂದೆಯೂ ನಮ್ಮದಾಗಿರುತ್ತದೆ: SDPI ಮುಖಂಡ ರಿಯಾಝ್

ಕೇಂದ್ರ ಸರ್ಕಾರ ತಂದಿರುವ ವಕ್ಫ್ ಆಸ್ತಿ ಸಂಬಂಧಿಸಿದ ಕಾನೂನಿನ ಬಗ್ಗೆ ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ SDPI ಮುಖಂಡ ರಿಯಾಝ್ ಕಡಂಬು ಅವರು ಮಾತನಾಡಿದ್ದಾರೆ. ವಕ್ಫ್ ಆಸ್ತಿ ಹಿಂದೆಯೂ ಮುಸಲ್ಮಾನರದ್ದಾಗಿತ್ತು ಇಂದು ಹಾಗೂ ಮುಂದೆಯೂ ಮುಸಲ್ಮಾನರದ್ದಾಗಿರುತ್ತದೆ. ಇದನ್ನು ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿಯ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧ. ಅಗತ್ಯ ಬಿದ್ದಲ್ಲಿ ಪ್ರಾಣ ನೀಡಿಯದರು ವಕ್ಫ್ ಆಸ್ತಿ ಉಳಿಸುತ್ತೇವೆ. ವಕ್ಫ್ ಆಸ್ತಿ ಮೇಲೆ ಬಿಜೆಪಿಗಾಗಲಿ ಯಾವುದೇ ಸರಕಾರಕ್ಕಾಗಲಿ ಅಧಿಕಾರವಿಲ್ಲ. ಬಾಬರಿ ಮಸೀದಿಯನ್ನು ಕಸಿದುಕೊಂಡಂತೆ ವಕ್ಫ್ ಆಸ್ತಿ ಕಸಿದುಕೊಳ್ಳಲು ಮುಂದಾಗಬೇಡಿ ಎಂದು ಎಚ್ಚರಿಕೆ ನೀಡಿದರು.
ಜೀವ ಭಯ ಬಿಟ್ಟು ಸಾವಿಗೂ ಹೆದರದೆ ಹೋರಾಟ ಮುಂದುವರೆಸುತ್ತೇವೆ. ಮುಸಲ್ಮಾನರ ಮೇಲೆ ದಾಳಿ ನಡೆದಾಗ ಪ್ರತಿಭಟಿಸಿದವರನ್ನು ಜೈಲಿಗೆ ಹಾಕಿದರು. ಬೀದಿಗಿಳಿದು ಹೋರಾಡಿದ ಕಾರಣ ಎನ್‌ಆರ್‌ಸಿಯನ್ನು ಶಕ್ತವಾಗಿ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದರು.