ಮಂಗಳೂರು: ದೈವರಾಧಕರ ಕೆಂಗಣ್ಣಿಗೆ ಗುರಿಯಾದ ಕಲ್ಜಿಗ ಸಿನಿಮಾ, ತೆರೆ ಕಂಡ ಮೊದಲ ದಿನವೇ ಬಾರಿ ಟೀಕೆ
ಭಾರತೀಯ ಸಿನಿಮಾರಂಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕಾಂತಾರ ಬಳಿಕ ಮತ್ತೊಂದು ಕನ್ನಡ ಸಿನಿಮಾದಲ್ಲಿ ದೈವದ ಚಿತ್ರೀಕರಣ ಬಂದಿದ್ದು, ಇದೀಗ ಈ ಸಿನಿಮಾವು ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ಕನ್ನಡದಲ್ಲಿ ತೆರೆ ಕಂಡಿರುವ ಕಲ್ಜಿಗ ಸಿನಿಮಾದಲ್ಲಿ ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಚಿತ್ರೀಕರಣ ಮಾಡಲಾಗಿದೆ. ಕೊರಗಜ್ಜನ ವೇಷಭೂಷಣ ಧರಿಸಿ ಸಿನಿಮಾದ ಶೂಟಿಂಗ್ ಗಾಗಿ ನರ್ತನ ಮಾಡಿರುವ ಕುರಿತಾದ ಆರೋಪವೊಂದು ಕೇಳಿ ಬಂದಿದೆ.
ಕೋಸ್ಟಲ್ ವುಡ್ ಕಲಾವಿದರು ನಿರ್ಮಾಣ ಮಾಡಿರುವ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಕೋಸ್ಟಲ್ ವುಡ್ ನ ನಟ ಅರ್ಜುನ್ ಕಾಪಿಕಾಡ್ ನಟಿಸಿದ್ದು, ಈ ಕಲ್ಜಿಗ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ತೆರೆ ಕಂಡ ಮೊದಲ ದಿನವೇ ಟೀಕೆಗೆ ಗುರಿಯಾಗಿದೆ. ಸಿನಿಮಾ ತಂಡದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತ ಪಡಿಸಿದೆ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನವೊಂದು ಆರಂಭವಾಗಿದೆ. ಈ ಸಿನಿಮಾದಲ್ಲಿ ಕೊರಗಜ್ಜ ದೈವದ ಅನುಕರಣೆ ಮಾಡಿ ಚಿತ್ರೀಕರಣ ಮಾಡಿರುವುದಕ್ಕೆ ದೈವರಾಧಕರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಚಿತ್ರದ ವಿರುದ್ಧ ಕಾನೂನು ಹೋರಾಟ ನಡೆಸುವುದಕ್ಕೆ ನಿರ್ಧರಿಸಲಾಗಿದೆ.