ಮಂಗಳೂರು: ವಿಷಕಾರಿ ಹಾವು ಕಚ್ಚಿ ಬಂಟ್ವಾಳದ ರಾಮಚಂದ್ರ ಪೂಜಾರಿ ಸಾವು

ನಮಗೆ ಸಾಧ್ಯವೆಂದರೆ ಮಾತ್ರ ಆ ಕೆಲಸವನ್ನು ಮಾಡಬೇಕು, ಅಪಾಯದ ಕೆಲಸವನ್ನು ಯಾವತ್ತೂ ಮಾಡಬಾರದು ಎಂಬುದಕ್ಕೆ ಈ ಸ್ಟೋರಿ ಒಮ್ಮೆ ಓದಿ. ಮಂಗಳೂರು ಹೊರವಲಯದ ಬಜಪೆ ಎಂಬಲ್ಲಿ ವ್ಯಕ್ತಿಯೊಬ್ಬರು, ಹೆಬ್ಬಾವಿನ ಮರಿಯೆಂದು ವಿಷದ ಹಾವಿನ ಮರಿ ಹಿಡಿದು ಹಾವು ಕಚ್ಚಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೆಬ್ಬಾವಿನ ಮರಿಯೆಂದು ತಪ್ಪು ಗ್ರಹಿಕೆ ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳೂರು ಹೊರವಲಯದ ಬಜಪೆ ಎಂಬಲ್ಲಿ ನಡೆದ ಘಟನೆ ಬಂಟ್ವಾಳದ ರಾಮಚಂದ್ರ ಪೂಜಾರಿ (58) ಮೃತ ದುರ್ದೈವಿ ಎಂದು ಹೇಳಲಾಗಿದೆ. ಮರವೂರಿನ ಮನೆಯೊಂದರಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ ಬಂಟ್ವಾಳದ ರಾಮಚಂದ್ರ ಪೂಜಾರಿ ಅವರು ಸೆ.4 ರಂದು ಮಧ್ಯಾಹ್ನ ಮನೆಯ ಮೆಟ್ಟಿಲು ಸಮೀಪ ಕಾಣಿಸಿಕೊಂಡಿದ್ದ ಹಾವಿನ ಮರಿಯನ್ನು ಹಿಡಿಯಲು ಹೋಗಿದ್ದಾರೆ.
ಕಂದಡಿ ಹಾವಿನ ಮರಿಯನ್ನು ಹೆಬ್ಬಾವಿನ ಮರಿ ಎಂದು ಭಾವಿಸಿ ಬರಿಗೈಯಲ್ಲಿ ಹಿಡಿದಿದ್ದಾರೆ. ಹಿಡಿಯುವ ಸಂದರ್ಭ ರಾಮಚಂದ್ರ ಅವರ ಕೈಗೆ ಹಾವಿನ ಮರಿ ಕಚ್ಚಿದೆ. ಹೆಬ್ಬಾವಿನ ಮರಿಯಲ್ಲ ಎಂದು ನಿರ್ಲಕ್ಷಿಸಿದ್ದ ರಾಮಚಂದ್ರ ಬರಿಗೈಯಲ್ಲಿ ಹಿಡಿದಿದ್ದಾರೆ. ಈ ವೇಳೆ ಹಾವು ಅವರಿಗೆ ಕಚ್ಚಿದೆ. ಇನ್ನು ಅಸ್ವಸ್ಥಗೊಂಡು ರಾಮಚಂದ್ರ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ರಾಮಚಂದ್ರ ಸಾವನ್ನಪ್ಪಿದ್ದಾರೆ.